ಪ್ರಧಾನಿಯಿಂದ ತವರು ವಾರಣಾಸಿ ಕ್ಷೇತ್ರಕ್ಕೆ ಬರಪೂರ ಕೊಡುಗೆ

ವಾರಣಾಸಿ, ಫೆಬ್ರವರಿ 10, ಹೊಸ ವರ್ಷದಲ್ಲಿ  ಪ್ರಧಾನಿ ನರೇಂದ್ರ ಮೋದಿ ಇದೆ  16 ರಂದು ತವರು  ವಾರಣಾಸಿ ಕ್ಷೇತ್ರಕ್ಕೆ ಆಗಮಿಸುತ್ತಿದ್ದು, 1,700 ಕೋಟಿ ರೂಪಾಯಿ  ಬರಪೂರ ಕೊಡುಗೆ ಪ್ರಕಟಿಸಲಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಮತ್ತು ಇನ್ನೂ ಅನೇಕ ಸಚಿವರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಪ್ರಧಾನಿ 52 ಯೋಜನೆಗಳನ್ನು ಉದ್ಘಾಟಿಸಿ,  ಮತ್ತು ಇನ್ನೂ 23 ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸುವ ನಿರೀಕ್ಷೆಯಿದೆ.

ಭೇಟಿಯ ಸಮಯದಲ್ಲಿ, ನಗರದ ಜಂಗಂಬಾಡಿ ಮಠದಲ್ಲಿ 38 ದಿನಗಳ ವೀರಶೈವ ಮಹಾಕುಂಭದ ಸಮಾರೋಪ ಸಮಾರಂಭದಲ್ಲಿ ಪ್ರಧಾನಿ ಭಾಗವಹಿಸಲಿದ್ದಾರೆ ಎಂದೂ  ಮೂಲಗಳು ತಿಳಿಸಿವೆ.ಜಂಗಂಬಾಡಿ ಮಠದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅವರು ಜಗದ್ಗುರು ವಿಶ್ವರೂಪ ಗುರುಕುಲಂ  ಶತಮಾನೋತ್ಸವ ಕಾರ್ಯಕ್ರಮದ ಅಂಗವಾಗಿ  ಡಿಜಿಟಲ್ ಆ್ಯಪ್ ಅನ್ನು ಬಿಡುಗಡೆ ಮಾಡಲಿದ್ದಾರೆ. ಇದಲ್ಲದೆ ಅವರು 19 ಭಾಷೆಗಳಲ್ಲಿ ‘ಸಿದ್ಧಾಂತ ಶಿಖಮಣಿ’ ಎಂಬ ಮಹಾಕಾವ್ಯದ ಅನುವಾದಿತ ಆವೃತ್ತಿಯನ್ನೂ ಬಿಡುಗಡೆ ಮಾಡಲಿದ್ದಾರೆ.2020 ರಲ್ಲಿ ಪ್ರಧಾನಿ ತಮ್ಮ ಕ್ಷೇತ್ರಕ್ಕೆ ನೀಡುತ್ತಿರುವ  ಮೊದಲ ಭೇಟಿಯಾಗಿದೆ. ಇದಲ್ಲದೆ, ಯುಪಿ ಎಕ್ಸ್‌ಪ್ರೆಸ್ ಹೆದ್ದಾರಿ, ಸಿ-ಪ್ಯಾಟ್ ತರಬೇತಿ ಕೇಂದ್ರವನ್ನು ಮೋದಿ ಉದ್ಘಾಟಿಸಲಿದ್ದು, ನಗರದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ  ಕೇಂದ್ರ  ತೆರೆಯುವ ಘೊಷಣೆ  ಮಾಡಲಿದ್ದಾರೆ.

ದೀನದಯಾಳ್ ಹಸ್ತಕಲಾ ಸಂಕುಲ್‌ನಲ್ಲಿರುವ ಯುಪಿ ಇನ್‌ಸ್ಟಿಟ್ಯೂಟ್ ಆಫ್ ಡಿಸೈನ್‌ನ ಒನ್ ಡಿಸ್ಟ್ರಿಕ್ಟ್, ಒನ್ ಪ್ರಾಡಕ್ಟ್ (ಒಡಿಒಪಿ) ಅಡಿಯಲ್ಲಿ ಖರೀದಿದಾರ-ಮಾರಾಟಗಾರರ ಸಭೆ ಮತ್ತು ಕರಕುಶಲ ಪ್ರದರ್ಶನದಲ್ಲೂ ಅವರು  ಭಾಗಿಯಾಗಲಿದ್ದಾರೆ.ಪ್ರಧಾನಿ ಭೇಟಿಗೆ ಮೊದಲು ರಾಜ್ಯದ  ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ವಾರಣಾಸಿಗೆ ಭೇಟಿ ನೀಡುವ ನಿರೀಕ್ಷೆಯಿದೆ.