ಬ್ಯಾಂಕ್ ನೌಕರರ ಮುಷ್ಕರ: ವಹಿವಾಟು ಏರುಪೇರು , ಮುಕ್ತಿ ಕಾಣದ 31 ಲಕ್ಷ ಚೆಕ್ ಗಳು

ಹೈದರಾಬಾದ್, ಜನವರಿ 3, 9 ಬ್ಯಾಂಕ್ ಒಕ್ಕೂಟಗಳನ್ನು ಒಳಗೊಂಡ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (ಯುಎಫ್‌ಬಿಯು) ನೀಡಿದ ಕರೆಯ ಮೇರೆಗೆ  10 ಲಕ್ಷ ಬ್ಯಾಂಕ್ ನೌಕರರು ಮತ್ತು ಅಧಿಕಾರಿಗಳು ದೇಶಾದ್ಯಂತ ಎರಡು ದಿನಗಳ ಮುಷ್ಕರ ನಡೆಸುತ್ತಿದ್ದು, ದೇಶದ  ಹಣಕಾಸು ಪರಿಸ್ಥಿತಿ, ವಹಿವಾಟು ಬಹಳ ಏರುಪೇರಾಗಿದೆ.ಮುಷ್ಕರದ ಪರಿಣಾಮ 23,000 ಕೋಟಿ ರೂಪಾಯಿ ಮೊತ್ತದ 31 ಲಕ್ಷ ಚೆಕ್ ಗಳು ಕ್ಲೀಯರ್ , ಆಗದೆ  ಮುಕ್ತಿ ಕಾಣದೆ  ಹಾಗೆಯೇ ಬಿದ್ದಿವೆ.  ವೇತನ ಪರಿಷ್ಕರಣೆ ಮತ್ತು ಸೇವಾ ಪರಿಸ್ಥಿತಿಗಳ ಕುರಿತು 11 ನೇ ದ್ವಿಪಕ್ಷೀಯ ಒಪ್ಪಂದ ಜಾರಿಗಾಗಿ  ಮುಷ್ಕರ ನಡೆಸಲಾಗುತ್ತಿದೆ. 

ಮುಷ್ಕರದಲ್ಲಿ  ಎಐಬಿಇಎ, ಎಐಬಿಒಸಿ, ಎನ್‌ಸಿಬಿಇ, ಎಐಬಿಒಎ, ಬಿಎಫ್‌ಐ, ಇನ್‌ಬೆಫ್, ಐಎನ್‌ಬಿಒಸಿ, ಎನ್‌ಒಬಿಡಬ್ಲ್ಯೂ ಮತ್ತು ನೊಬೊ ಸೇರಿದಂತೆ ಒಟ್ಟು 9ಒಕ್ಕೂಟ ಗಳು ಭಾಗಿಯಾಗಿವೆ ಎಂದು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ (ಎಐಬಿಇಎ) ಪ್ರಧಾನ ಕಾರ್ಯದರ್ಶಿ  ವೆಂಕಟಾಚಲಂ ಯುಎನ್‌ಐಗೆ ತಿಳಿಸಿದ್ದಾರೆ.ದೇಶಾದ್ಯಂತದ ಬಂದಿರುವ ವರದಿಗಳ ಪ್ರಕಾರ, ಮುಖ್ಯವಾಗಿ  ತಮಿಳುನಾಡು, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಮಧ್ಯಪ್ರದೇಶ , ದೆಹಲಿ, ಪಂಜಾಬ್, ಗುಜರಾತ್, ಕರ್ನಾಟಕ, ಕೇರಳ ಮತ್ತು ಬಿಹಾರ, ಬ್ಯಾಂಕಿಂಗ್ ವಹಿವಾಟಿನ ಮೇಲೆ  ಹೆಚ್ಚಿನ  ಪರಿಣಾಮ ಬೀರಿದ್ದು ಒಟ್ಟಾರೆ ಮುಷ್ಕರ   ಯಶಸ್ವಿಯಾಗಿದೆ  ಎಂದು ಅವರು ಹೇಳಿದರು ಹೆಚ್ಚಿನ ಬ್ಯಾಂಕ್ ಶಾಖೆಗಳು ಮುಚ್ಚಿವೆ  ಹಣ  ಠೇವಣಿ ಇಡಲು ಅಥವಾ ಹಿಂಪಡೆಯಲು ಸಾಧ್ಯವಾಗಿಲ್ಲ . ಅನೇಕ ಎಟಿಎಂಗಳು ಸಹ ಕಾರ್ಯನಿರ್ವಹಿಸಲಿಲ್ಲ. ಚೆಕ್ ಅನ್ನು ಕ್ಲಿಯರಿಂಗ್ ಹೌಸ್ ಗೆ ಕಳುಹಿಸಲು ಸಾಧ್ಯವಾಗಿಲ್ಲ ಎಂದು ಅವರು ಹೇಳಿದರು.

ಮುಂಬೈ, ಚೆನ್ನೈ ಮತ್ತು ದೆಹಲಿಯ ಕ್ಲಿಯರಿಂಗ್ ಗ್ರಿಡ್‌ಗಳಲ್ಲಿ  ಸುಮಾರು 31 ಲಕ್ಷ ಚೆಕ್‌ಗಳ ಒಟ್ಟು ಮೊತ್ತ  23,ಸಾವಿರ  ಕೋಟಿ ರೂಪಾಯಿ ಕ್ಲೀಯರ್ ಆಗಬೇಕಿದೆ ಎಂದು ಹೇಳಿದರು. ವೇತನ ಪರಿಷ್ಕರಣೆ ಇತ್ಯರ್ಥವು ನವೆಂಬರ್, 2017 ರಿಂದ ಬಾಕಿಯಿದೆ  ಕಳೆದ 30 ತಿಂಗಳುಗಳಿಂದ ಚರ್ಚೆಗಳು ನಡೆಯುತ್ತಿದ್ದರೂ ಸಹ, ಬ್ಯಾಂಕ್ ನೌಕರರ ಬೇಡಿಕೆಗಳನ್ನು ಇತ್ಯರ್ಥಗೊಳಿಸಲು ಸರ್ಕಾರ ಮುಂದಾಗಿಲ್ಲ . ಯಾವುದೇ ತೀರ್ಮಾನಕ್ಕೆ ಬರಲಾಗಿಲ್ಲ  ಎಂದೂ   ಅವರು ದೂರಿದ್ದಾರೆ. 

ಬ್ಯಾಂಕ್ ನೌಕರರ ಸಂಘದ ಮುಷ್ಕರ ಕರೆಗೆ ಬೆಂಬಲ ನೀಡಿರುವ ವಿವಿಧ ಬ್ಯಾಂಕ್ಗಳ ನೌಕರರ ಒಕ್ಕೂಟದ ಸದಸ್ಯರು ಬೀದಿಗಿಳಿದು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ. ವಾರದಲ್ಲಿ ಐದು ದಿನ ಬ್ಯಾಂಕ್ ಕಾರ್ಯ ನಿರ್ವಹಣೆ ಮತ್ತು ಶೇ.20ರಷ್ಟು ವೇತನ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಷ್ಟ್ರವ್ಯಾಪಿ ಮುಷ್ಕರ ಹಮ್ಮಿಕೊಳ್ಳಲಾಗಿದೆ. 

ಹಾಗೆಯೇ ನೌಕರರ ಪಿಂಚಣಿ ಪರಿಷ್ಕರಣೆ; ಕುಟುಂಬ ಪಿಂಚಣಿ ಉತ್ತೇಜನ  ಸಿಬ್ಬಂದಿ ಕಲ್ಯಾಣ ವೇತನ ಏರಿಕೆ; ಎಲ್ಲರಿಗೂ ಒಂದೇ ಸಮಯ ನಿಗದಿಪಡಿಸಬೇಕು ಎಂಬುದು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ ಪ್ರಮುಖ ಬೇಡಿಕೆಯಾಗಿದೆ  ಈ ಹಿಂದೆಯೂ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ 2 ದಿನಗಳ ಬ್ಯಾಂಕ್ ಮುಷ್ಕರ ಹೂಡಿತ್ತು. ಆಗ ತಮ್ಮ ಸಮಸ್ಯೆಗಳ ಬಗೆಹರಿಸುವುದಾಗಿ ಕೇಂದ್ರ ಹಣಕಾಸು ಕಾರ್ಯದರ್ಶಿ ಭರವಸೆ ನೀಡಿದ್ದರು. ಆದರೆ, ಇಲ್ಲಿಯವರೆಗೂ ಕೇಂದ್ರ ಸರ್ಕಾರ ನೀಡಿದ ಭರವಸೆ ಇನ್ನೂ ಈಡೇರಿಸಿಲ್ಲ. ನಮ್ಮ ಬೇಡಿಕೆಗಳನ್ನು ಈಡೇರಿಕೆಗೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ  ಮುಷ್ಕರ ನಡೆಸಲಾಗುತ್ತಿದೆ,  ನಾಳೆಯೂ  ಇದು  ಮುಂದುವರೆಯಲಿದೆ.