ನವದೆಹಲಿ, ಸೆ 16 ಆರನೇ ಶ್ರೇಯಾಂಕದ ಭಾರತದ ಸುಮಿತ್ ನಗಾಲ್ ಅವರು ಬಂಜ ಲುಕಾ ಚಾಲೆಂಜರ್(ಬೋಸ್ನಿಯಾ ಮತ್ತು ಹಜರ್ೆಗೋವಿನಾ) 2019ರ ಟೆನಿಸ್ ಟೂರ್ನಿಯ ಫೈನಲ್ ಹಣಾಹಣಿಯಲ್ಲಿ ನೇದರ್ಲೆಂಡ್ನ ಟಾಲನ್ ಗ್ರಿಕ್ಸ್ಪೂರ್ ಅವರ ವಿರುದ್ಧ ಸೋತು ರನ್ನರ್ ಅಪ್ಗೆ ತೃಪ್ತಿಪಟ್ಟರು
ಭಾನುವಾರ ತಡರಾತ್ರಿ 91 ನಿಮಿಷಗಳ ಕಾಲ ನಡೆದ ಪುರುಷರ ಸಿಂಗಲ್ಸ್ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ನೀರಸ ಪ್ರದರ್ಶನ ತೋರಿದ 22ರ ಪ್ರಾಯದ ಹರಿಯಾಣದ ಯುವಕ 2-6, 3-6 ನೇರ ಸೆಟ್ಗಳ ಅಂತರದಲ್ಲಿ ಟಾಲನ್ ಗ್ರಿಕ್ಸ್ಪೂರ್ ವಿರುದ್ಧ ಸೋತು ತೀವ್ರ ನಿರಾಸೆಗೆ ಒಳಗಾದರು.
174ನೇ ವಿಶ್ವ ಶ್ರೇಯಾಂಕದ ಸುಮಿತ್ 21ರಲ್ಲಿ 16 ಬ್ರೇಕ್ ಪಾಯಿಂಟ್ಗಳನ್ನು ಉಳಿಸಿಕೊಂಡು, ಐದರಲ್ಲಿ ಜಯ ಸಾಧಿಸಿದರು. 187ನೇ ಶ್ರೇಯಾಂಕದ 23ರ ಪ್ರಾಯದ ಡಚ್ ಆಟಗಾರ 21 ಬ್ರೇಕ್ ಪಾಯಿಂಟ್ಗಳಲ್ಲಿ ಐದರಲ್ಲಿ ಜಯ ಸಾಧಿಸಿದರು. ಇದರಲ್ಲಿ ನಾಲ್ಕು ಬ್ರೇಕ್ ಪಾಯಿಂಟ್ಗಳನ್ನು ಉಳಿಸಿಕೊಂಡರು.
ಸುಮಿತ್ ನಗಾಲ್ ಅವರು ಇತ್ತೀಚೆಗೆ ವೃತ್ತಿ ಜೀವನದ ಮೊದಲ ಬಾರಿ ಯುಎಸ್ ಓಪನ್ ಪದಾರ್ಪಣೆ ಮಾಡಿದ್ದರು. ಇಲ್ಲಿ ಅವರು ವಿಶ್ವ ಎರಡನೇ ಶ್ರೇಯಾಂಕದ ಸ್ವಿಜರ್ಲೆಂಡ್ನ ರೋಜರ್ ಫೆಡರರ್ ವಿರುದ್ಧ ಮೊದಲ ಸುತ್ತಿನ ಪಂದ್ಯದಲ್ಲಿ ಆಡಿದ್ದರು. ಮೊದಲ ಸೆಟ್ನಲ್ಲಿ ಗೆದ್ದರೂ ನಂತರದ ಸೆಟ್ಗಳಲ್ಲಿ ಸೋತು ಪಂದ್ಯ ಬಿಟ್ಟುಕೊಟ್ಟಿದ್ದರು.
ಪ್ರಸ್ತುತ ಟೂರ್ನಿಯಲ್ಲಿ ರನ್ನರ್ ಅಪ್ ಆಗುವ ಮೂಲಕ ಸುಮಿತ್ ನಗಾಲ್ 48 ಎಟಿಪಿ ಅಂಕಗಳನ್ನು ತನ್ನ ಖಾತೆಗೆ ಸೇರಿಸಿಕೊಂಡರು. ಚಾಂಪಿಯನ್ ಗ್ರಿಕ್ಸ್ಪೂರ್ ಅವರು 80 ಎಟಿಪಿ ಅಂಕಗಳನ್ನು ಕಿಸೆಗೆ ತುಂಬಿಕೊಂಡರು.