ಢಾಕಾ, ಅ.24: ಭಾರತ ಹಾಗೂ ಬಾಂಗ್ಲಾದೇಶ ನಡುವಣ ನವಂಬರ್ 3 ರಿಂದ ಆರಂಭಲಿರುವ ಸರಣಿಯ ಮೇಲೆ ಬಿದ್ದಿದ್ದ ಕಾರ್ಮೊಡ ನಿವಾರಣೆ ಆಗಿದೆ. ಬಾಂಗ್ಲಾ ಕ್ರಿಕೆಟ್ ಆಟಗಾರರು ಬುಧವಾರ ಕ್ರಿಕೆಟ್ ಬೋರ್ಡ್ಹಾಗೂ ಅಧಿಕಾರಿಗಳು ನಡುವೆ ನಡೆದ ಸಭೆ ಫಲಪ್ರದವಾಗಿದ್ದು, ಕ್ರಿಕೆಟಿಗರ ಬೇಡಿಕೆ ಈಡೇರಿಕೆಗೆ ಸಮ್ಮತಿ ಸೂಚಿಸಲಾಗಿದೆ. ಭಾರತ ಪ್ರವಾಸ ಬೆಳೆಸಲು ಸಿದ್ಧತೆ ನಡೆಸಿದೆ.
ಬಾಂಗ್ಲಾ ಕ್ರಿಕೆಟ್ ಬೋಡರ್್ (ಬಿಸಿಬಿ) ಹಾಗೂ ಕ್ರಿಕೆಟ್ ಆಟಗಾರರ ನಡುವಿನ ಕಿತ್ತಾಟಕ್ಕೆ ಬುಧವಾರ ತೆರೆ ಬಿದ್ದಿದೆ. ಸೋಮವಾರ ನಾಯಕ ಶಕೀಬ್ ಅಲ್ ಹಸನ್ ಅವರ ಮುಂದಾಳತ್ವದಲ್ಲಿ ಆಟಗಾರರು ತಮ್ಮ ಬೇಡಿಕೆಗಳ ಈಡೇರಿಕೆಗೆ ಮುಷ್ಕರ ಆರಂಭಿಸಿದ್ದರು. ಅಲ್ಲದೆ ತಮ್ಮ ಬೇಡಿಕೆ ಈಡೇರಿಕೆ ಆಗುವ ವರೆಗೂ ಆಡುವುದಿಲ್ಲ ಎಂದು ತಿಳಿಸಿದ್ದರು.
ಬುಧವಾರ ರಾತ್ರಿ ಕ್ರಿಕೆಟ್ ಆಟಗಾರರು ಹಾಗೂ ಬೋರ್ಡ್ ಆಡಳಿತಾಧಿಕಾರಿಗಳ ನಡುವೆ ಸಭೆ ನಡೆಯಿತು. ಈ ಬಳಿಕ ಆಟಗಾರರು ಮುಷ್ಕರವನ್ನು ಹಿಂದೆ ಪಡೆದಿದ್ದಾರೆ. ಸಭೆ ಬಳಿಕ ಮಾತನಾಡಿದ ಕ್ರಿಕೆಟಿಗರು, "ಬಿಸಿಬಿ ತಮ್ಮ ಬೇಡಿಕೆ ಈಡೇರಿಸುವುದಾಗಿ ತಿಳಿಸಿದೆ. ಅಲ್ಲದೆ ಶೀಘ್ರದಲ್ಲಿ ಬೇಡಿಕೆ ಈಡೇರಿಕೆ ಭರವಸೆಯನ್ನು ಅಧ್ಯಕ್ಷರು ನೀಡಿದ್ದಾರೆ" ಎಂದು ಶಕೀಬ್ ಅಲ್ ಹಸನ್ ಹೇಳಿದ್ದಾರೆ.
"ಬಿಸಿಬಿ ಅಧ್ಯಕ್ಷರ ಜೊತೆಗಿನ ಮಾತುಕತೆ ಬಳಿಕ ಆಟಗಾರರು ಶನಿವಾರದಿಂದ ಪ್ರಥಮ ದರ್ಜೆ ಕ್ರಿಕೆಟ್ ಆಡಲು ಆರಂಭಿಸಲಿದ್ದೇವೆ. ಭಾರತ ಪ್ರವಾಸಕ್ಕಾಗಿ ಅ.25ರಿಂದ ತರಬೇತಿ ಆರಂಭವಾಗಲಿದೆ. ಈ ಶಿಬಿರದಲ್ಲಿ ರಾಷ್ಟ್ರೀಯ ತಂಡದ ಆಟಗಾರರು ಭಾಗವಹಿಸಲಿದ್ದಾರೆ" ಎಂದು ಶಕೀಬ್ ಹೇಳಿದ್ದಾರೆ.