ಬೆಳಗಾವಿ, ಫೆ 28 : ಬೆಂಗಳೂರು ವಕೀಲರ ಸಂಘದ ವಕೀಲರು ಶುಕ್ರವಾರ, ದೇಶದ್ರೋಹ ಪ್ರಕರಣದಲ್ಲಿ ಹಿಂಡಲಗಾ ಜೈಲಿನಲ್ಲಿರುವ ಕಾಶ್ಮೀರದ ಮೂರು ಇಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಭೇಟಿ ಮಾಡಿದರು.
ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ 'ಪಾಕಿಸ್ತಾನ ಜಿಂದಾಬಾದ್ ' ಎಂದು ಘೋಷಣೆಯನ್ನೊಳಗೊಂಡ ವಿಡಿಯೋವನ್ನು ಹರಿಬಿಟ್ಟಿದ್ದ ಮೂವರು ಕಾಶ್ಮೀರಿ ವಿದ್ಯಾರ್ಥಿಗಳನ್ನು ಅಮಿರ್, ನಾಸಿರ್ ಹಾಗೂ ತಾಲಿಬ್ ಎಂದು ಗುರುತಿಸಲಾಗಿದೆ.
ವಕೀಲರು ಬಂಧಿತರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.
ಇತ್ತೀಚೆಗೆ ಹೈಕೋರ್ಟ್, ಬಂಧಿತರ ಪರ ವಾದ ಮಂಡಿಸಲು ನಿರಾಕರಿಸಿದ ಹುಬ್ಬಳ್ಳಿ-ಧಾರವಾಡ ವಕೀಲರ ಸಂಘದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತ್ತು. ನಂತರ, ಸಂಘ ಈ ನಿರ್ಣಯವನ್ನು ಹಿಂಪಡೆದಿತ್ತು.