ಮಾನಹಾನಿ ಪ್ರಕರಣ: ರಾಹುಲ್ಗೆ ಜಾಮೀನು

ಮುಂಬೈ 4: ಪತ್ರಕರ್ತ ಗೌರಿ ಲಂಕೇಶ್ ಹತ್ಯೆಗೆ  ಬಿಜೆಪಿ-ಆರ್ಎಸ್ಎಸ್ಸಿದ್ಧಾಂತ ಕಾರಣ  ಎಂಬ ಹೇಳಿಕೆ   ನೀಡಿದ್ದ  ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ   ವಿರುದ್ಧ ಆರ್ ಎಸ್ ಎಸ್ ಕಾರ್ಯಕರ್ತರೊಬ್ಬರು  ಹೊಡಿದ್ದ  ಮಾನನಷ್ಟ ಮೊಕದ್ದಮೆ  ಪ್ರಕರಣದಲ್ಲಿ     ಸ್ಥಳೀಯ ನ್ಯಾಯಾಲಯ   ಅವರಿಗೆ   ಗುರುವಾರ ಜಾಮೀನು ಮಂಜೂರು ಮಾಡಿದೆ.

   ನ್ಯಾಯಾಲಯದ ಎದುರು ಹಾಜರಾಗಿದ್ದ  ರಾಹುಲ್ ಗಾಂಧಿ  "ತಾವೇನು ತಪ್ಪು ಎಸಗಿಲ್ಲ  ಎಂದು ವಾದಿಸಿದರು, ನಂತರ ನ್ಯಾಯಾಲಯ ಅವರಿಗೆ 15 ಸಾವಿರ ರೂಪಾಯಿ  ಭದ್ರತೆಯ ಮೇಲೆ ಜಾಮೀನು ಮಂಜೂರು ಮಾಡಿತು ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಂಸದ ಏಕನಾಥ್ ಗಾಯಕ್ವಾಡ್  ರಾಹುಲ್ ಗಾಂಧಿ ಅವರಿಗೆ  ಶೂರಿಟಿ ನೀಡಿದರು. ದೂರುದಾರ ಧೃತಿಮಾನ್  ಜೋಷಿ  ಯುಪಿಎ ಅಧ್ಯಕ್ಷೆ  ಸೋನಿಯಾ ಗಾಂಧಿ ಹಾಗೂ ಸಿಪಿಎಂ ನಾಯಕ ಸೀತಾರಾಮ್  ಯಚೂರಿ ವಿರುದ್ದವೂ ಇಂತಹದೇ ಪ್ರಕರಣ ದಾಖಲಿಸಿದ್ದರು,  ನಂತರ ಅವುಗಳನ್ನು ನ್ಯಾಯಾಲಯ ವಜಾಗೊಳಿಸಿತ್ತು ಗೌರಿ ಲಂಕೇಶ್  ಹತ್ಯೆಗೊಳಿಸಿದ 24 ಗಂಟೆಗಳಲ್ಲಿ   ಕೊಲೆಗೆ  ಆರ್ ಎಸ್ ಎಸ್  ಸಿದ್ಧಾಂತಗಳೇ ಕಾರಣ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು ಎಂದು  ಅರ್ಜಿದಾರ  ಧೃತಿಮಾನ್ ಜೋಷಿ  ತಮ್ಮ ಅರ್ಜಿಯಲ್ಲಿ ದೂರಿದ್ದರು.