ಕಂಪ್ಲಿ02:. ಬಹುಜನ ಸಮಾಜ ಪಾಟರ್ಿಯ ತತ್ವ, ಸಿದ್ಧಾಂತಗಳನ್ನು ಕಾರ್ಯಕರ್ತರು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಪಕ್ಷದ ಏಳಿಗೆಗೆ ಶ್ರಮಿಸಬೇಕು ಎಂದು ಬಳ್ಳಾರಿ, ಗದಗ್ ಮತ್ತು ಹಾವೇರಿ ವಿಭಾಗೀಯ ಉಸ್ತುವಾರಿ ಎಲ್.ಸಂತೋಷ್ ಹೇಳಿದರು.
ತಾಲೂಕಿನ ಅತಿಥಿ ಗೃಹದ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬಹುಜನ ಸಮಾಜ ಪಾಟರ್ಿಯ ಸಂಘಟನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಬಹುಜನ ಸಮಾಜ ಪಕ್ಷವನ್ನು ಬೂತ್ ಮಟ್ಟದಿಂದ ದೊಡ್ಡ ಮಟ್ಟದಲ್ಲಿ ಬೆಳೆಸಬೇಕು. ಕಾರ್ಯಕರ್ತರು ಪಕ್ಷದ ಬಲವರ್ಧನೆಗೆ ಅಗಲಿರುಳು ದುಡಿಯಬೇಕು ಎಂದರು.
ಈ ಸಂದರ್ಭದಲ್ಲಿ ಬಹುಜನ ಸಮಾಜ ಪಕ್ಷದ ಜಿಲ್ಲಾಧ್ಯಕ್ಷ ಎಚ್.ಎಂ.ಕುಮಾರ್, ಕಾರ್ಯಕರ್ತರಾದ ಉಮಾಪತಿ, ಗೋವಿಂದಪ್ಪ, ರಾಮಪ್ಪ, ಶಶಿ, ರಘು, ಷಣ್ಮುಕಪ್ಪ, ಯಲ್ಲಪ್ಪ, ಸಂಜು ಸೇರಿದಂತೆ ಅನೇಕರಿದ್ದರು.
ಆಯ್ಕೆ: ಬಹುಜನ ಸಮಾಜ ಪಾಟರ್ಿಯ ಕಂಪ್ಲಿ ವಿಧಾನಸಭಾ ಕ್ಷೇತ್ರಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸಿ.ಎ.ಚನ್ನಪ್ಪ(ಅಧ್ಯಕ್ಷ), ಎಮ್ಮಿಗನೂರು ಮಾರುತಿ(ಉಪಾಧ್ಯಕ್ಷ), ಮಹೇಶ್ಬಾಬು(ಪ್ರಧಾನ ಕಾರ್ಯದಶರ್ಿ), ಬಸವರಾಜ(ಕಾರ್ಯದಶರ್ಿ) ಇವರು ಸವರ್ಾನುಮತದಿಂದ ಆಯ್ಕೆಗೊಂಡರು.