ಲೋಕದರ್ಶನ ವರದಿ
ಗಜೇಂದ್ರಗಡ 13: ಪಟ್ಟಣದ ಖ್ಯಾತ ಉದ್ಯಮಿಗಳಾದ ಅಶೋಕ ಭಾಗಮಾರ ಅವರ ಸೇವಾ ಸಮಿತಿ ವತಿಯಿಂದ ಇತ್ತೀಚಿಗೆ ನಡೆದ ಪ್ರವಾಹದಲ್ಲಿ ಸಂತ್ರಸ್ತರಿಗೆ ಮೂಲಭೂತ ವಸ್ತುಗಳಾದ ಚಾಪೆ, ಬೇಡಶೀಟ್, ಟೋಪಿಗೆ, ಶಾಲು, ಮೆಡಿಶೀನ್, ಆಹಾರ ವಸ್ತುಗಳಾದ ಪಲಾವ್, ರೊಟ್ಟಿ, ಚಟ್ನಿ, ಬಿಸ್ಕತ್ತು, ಬನ್, ಬ್ರೇಡ್, ಸೇಬು, ಮೊಸಂಬಿ, ಬಾಳೆಹಣ್ಣು, ಸೇರಿದಂತೆ ಮತ್ತಿತ್ತರ ಆಹಾರ ಪದಾರ್ಥಗಳನ್ನು ವಿತರಿಸುವ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ.
ಬಳಿಕ ಭಾಗಮಾರ ಸೇವಾ ಸಮಿತಿ ಅಧ್ಯಕ್ಷ ಅಶೋಕ ಭಾಗಮಾರ ಮಾತನಾಡಿ ನಮ್ಮ ಜಿಲ್ಲೆಯ ಮೆಣಸಿಗೆ ಗ್ರಾಮದ ಅಕ್ಕ ಪಕ್ಕದಲ್ಲಿ ವೈದ್ಯಕೀಯ ತಪಾಸಣೆಯನ್ನು ನಡೆಸಿದ ಖುಷಿ ನಮಗಿದೆ. ಅದರಂತೆ ಪಕ್ಕದ ಜಿಲ್ಲೆಯಾದ ಬಾಗಲಕೋಟ ಜಿಲ್ಲೆಯ ಡಾನಕಾ ಶಿರೋರ, ನವಲಹಳ್ಳಿ, ಮಂಗಳೂರು, ಶಿರಬಡಗಿ, ಸೇರಿದಂತೆ ಮತ್ತಿತರ ಗ್ರಾಮಗಳಲ್ಲಿ ನಮ್ಮ ಸೇವಾ ಸಮಿತಿಯಿಂದ ಕೈಲಾದ ಮಟ್ಟಿಗೆ ನಾವು ಸಹಾಯ ಮಾಡಿದ್ದೇವೆ. ನಮ್ಮ ತಂದೆಯವರು ತಿಳಿಸಿದಂತೆ ಎಲ್ಲಿಯೇ ಪ್ರಕೃತಿ ವಿಕೋಪ ಆದರೂ ಸಹಿತ ನಮ್ಮ ಸಂಸ್ಥೆಯಿಂದ ಸದಾಕಾಲ ನಾವೂ ನೆರವಿಗೆ ದಾವಿಸಲು ಮುಂದೆ ಬರುತ್ತವೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ಜನರ ಜೀವನವನ್ನು ನೋಡಿದರೆ ಎಂತಹವರ ಮನವೂ ಕೂಡಾ ಕಲುಕುತ್ತದೆ. ಇನ್ನು ಮಂದೆ ಇಂತಹ ಅಚಾತುರ್ಯಗಳು ನಡೆಯಬಾರದು ಎಂದರು.
ಈ ಸಂದರ್ಭದಲ್ಲಿ ಉತ್ತಮಚಂದ ಬೇದಮುತ್ತಾ, ಅಜಿತ ಭಾಗಮಾರ, ವರ್ದಮಾನ ಭಾಗಮಾರ, ಶ್ರಯಶ್ ಭಾಗಮಾರ, ಅಬ್ದುಲ್ ರಜಾಕ ಕೋಲಕಾರ, ರಾಘು ಗೊಂದಳೆ, ಗುರು ನಾವಡೆ, ಶ್ರೀಧರ ಗಂಜಿಗೌಡ್ರ, ಹಸನ ತಟಗಾರ, ಅರಿಹಂತ ಭಾಗಮಾರ, ಯಶಸ್ವಿ ಭಾಗಮಾರ, ರೀದ್ದಿ ಭಾಗಮಾರ, ಯುವರಾಜ ಭಾಗಮಾರ,ದರ್ಶನ ಭಾಗಮಾರ, ಕೆ.ಎಸ್.ಬೆಲ್ಲದ, ಸೇರಿದಂತೆ ಭಾಗಮಾರ ಆಯರ್ುವೇದಿಕ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿ ಗಳು ಇದ್ದರು.