ಮಹಾ ರಾಷ್ಟ್ರ ಪ್ರಶಸ್ತಿಗೆ ಬಾದಾಮಿ ತಾಲೂಕು ಆಯ್ಕೆ

ಕೇಂದ್ರ ಸರಕಾರದ ರಾಷ್ಟ್ರೀಯ ಪೋಷಣಾ

ಬಾಗಲಕೋಟೆ 11: ಬಾದಾಮಿ ತಾಲೂಕಿನ ಸೂಳಿಕೇರಿ ಗ್ರಾಮದ ಅಂಗನವಾಡಿ ಕಾರ್ಯಕತರ್ೆ ಸಾವಂತ್ರೆವ್ವ ಶಿರೂರ, ಆಶಾ ಕಾರ್ಯಕತರ್ೆ ಮಂಜುಳಾ ಹನುಮರ, ಕಟಗೇರಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ .ಎನ್.ಎಂ ಸರಸ್ವತಿ ಅರಕೇರಿ ಅವರಿಗೆ ಕೇಂದ್ರ ಸರಕಾರದ ರಾಷ್ಟ್ರೀಯ ಪೋಷಣಾ ಮಹಾ ಪ್ರಶಸ್ತಿ ಲಭಿಸಿದೆ.

       ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಿಂದ ಸೆಪ್ಟೆಂಬರ ತಿಂಗಳಲ್ಲಿ ರಾಷ್ಟ್ರೀಯ ಪೋಷಣಾ ಮಾಸ ಹಮ್ಮಿಕೊಳ್ಳಲಾಗಿದ್ದು, ಇದು ಗ್ರಾಮೀಣ ಪ್ರದೇಶದಲ್ಲಿಯ ಮಹಿಳೆಯರ ಆರೋಗ್ಯ ರಕ್ಷಣೆ, ಗಭರ್ಿಣಿಯರ ಆರೋಗ್ಯ, ಮಕ್ಕಳಲ್ಲಿ ಉಂಟಾಗುವ ಅಪೌಷ್ಠಿಕತೆ ನಿವಾರಣೆ, ಮಕ್ಕಳ ಲಾಲನೆ ಪಾಲನೆ, ಗಭರ್ಿಣಿಯರಿಗೆ ಸೀಮಂತ ಕಾರ್ಯ, 10 ಮಾರಕ ರೋಗಳಿಂದ ಮಕ್ಕಳನ್ನು ರಕ್ಷಿಸುವ ಕುರಿತು ಹಾಗೂ ಬಾಲ್ಯವಿವಾಹ ನಿಷೇಧ ಸೇರಿದಂತೆ ಜಾಗೃತಿ ಕಾರ್ಯಕ್ರಮಗಳನ್ನು ಮೂಡಿಸುವಲ್ಲಿ ಬಾಗಲಕೋಟೆಯ ಜಿಲ್ಲೆಯ ಬಾದಾಮಿ ತಾಲೂಕಿನ ತಂಡ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ ಹಿನ್ನಲೆಯಲ್ಲಿ ಪ್ರಶಸ್ತಿ ಲಭಿಸಿದೆ.

      ದೆಹಲಿಯ ಅಶೋಕ ಹೋಟಲ್ನ ಸಭಾಭವನದಲ್ಲಿ ಬುಧವಾರ ನಡೆದ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಆಯೋಜಿಸಿದ್ದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮೂವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.