ಸೈರಸ್ ಮಿಸ್ತ್ರಿಗೆ ಸುಪ್ರೀಂ ಕೋರ್ಟ್ ನಲ್ಲಿ ಹಿನ್ನಡೆ

ನವದೆಹಲಿ, ಜ ೧೦ ಟಾಟಾ ಸನ್ಸ್  ಕಾರ್ಯಕಾರಿ  ಅಧ್ಯಕ್ಷರನ್ನಾಗಿ ಸೈರಸ್ ಮಿಸ್ತ್ರಿ ಅವರನ್ನು ಮರು ನೇಮಿಸಿ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯ ಮಂಡಳಿ (ಎನ್ಕ್ಲಾಟ್)  ನೀಡಿದ್ದ  ಆದೇಶಗಳಿಗೆ  ಸುಪ್ರೀಂ ಕೋರ್ಟ್  ತಡೆಯಾಜ್ಞೆ  ನೀಡಿದೆ.  ವಿಶೇಷವೆಂದರೆ, ಸೈರಸ್  ಮಿಸ್ತ್ರಿ  ಅವರನ್ನು ಟಾಟಾ ಗ್ರೂಪ್ ಮುಖ್ಯಸ್ಥರನ್ನಾಗಿ  ಮರು ನೇಮಿಸಿ   ಕಳೆದ  ಡಿಸೆಂಬರ್ನಲ್ಲಿ ಎನ್ಕ್ಲಾಟ್ ನೀಡಿದ್ದ  ಆದೇಶವನ್ನು ಪ್ರಶ್ನಿಸಿ ಟಾಟಾ ಸನ್ಸ್ ಸುಪ್ರೀಂ ಕೋರ್ಟ್   ಮೊರೆ ಹೋದ  ಒಂದು  ವಾರದಲ್ಲೇ   ತಡೆಯಾಜ್ಞೆ  ಆದೇಶ  ನೀಡಿರುವುದು ಗಮನಾರ್ಹವಾಗಿದೆ.ಸೈರಸ್ ಮಿಸ್ತ್ರಿ ಅವರನ್ನು  ಮತ್ತೆ  ಕಂಪನಿಯ ಮುಖ್ಯಸ್ಥರನ್ನಾಗಿ  ನೇಮಿಸುವ  ನ್ಯಾಯಮಂಡಳಿಯ ನಿರ್ಧಾರ ಇಡೀ ತೀರ್ಪಿನ ಮೇಲೆ ಪರಿಣಾಮ ಬೀರುತ್ತಿದೆ   ಎಂದು    ಮುಖ್ಯ ನ್ಯಾಯಮೂರ್ತಿ ಶರದ್ ಅರವಿಂದ್  ಬೊಬ್ಡೆ  ತಮ್ಮ ತೀರ್ಪಿನಲ್ಲಿ  ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಎನ್ಕ್ಲಾಟ್  ಆದೇಶವನ್ನು ಪ್ರಶ್ನಿಸಿದ್ದ  ಟಾಟಾ ಗ್ರೂಪ್,   ಮಿಸ್ತ್ರಿ   ಪುನರ್ ನೇಮಕ ಕಂಪನಿ  ಅನುಸಿರಿಸಿಕೊಂಡು  ಬಂದಿರುವ ಕಾರ್ಪೊರೇಟ್ ಆಡಳಿತ ಮಾನದಂಡಗಳ ಜೊತೆಗೆ ಒಟ್ಟಾರೆ ಕಂಪನಿಯ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ವಾದಿಸಿತ್ತು.   ಮಿಸ್ತ್ರಿ ಅವರನ್ನು ಟಾಟಾ ಸನ್ಸ್ ಕಂಪನಿಯ ಮುಖ್ಯಸ್ಥರನ್ನಾಗಿ  ಮರು ನೇಮಿಸುವ  ಎನ್ಕ್ಲಾಟ್  ನಿರ್ಧಾರ ಕಾನೂನು ಬಾಹಿರ ಎಂದು  ಘೋಷಿಸುವಂತೆ ಸುಪ್ರೀಂ ಕೋರ್ಟ್ ಅನ್ನು  ಅದು ಕೋರಿತ್ತು.