ಬೆಂಗಳೂರು, ಆಗಸ್ಟ್ 20 ರಾಜಭವನದ ಗಾಜಿನ ಮನೆಯಲ್ಲಿ ಮಂಗಳವಾರ ಬಿಜೆಪಿಯ ನೂತನ ಮಂತ್ರಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ಸುಗಮ ಸಂಚಾರಕ್ಕಾಗಿ ತಿಮ್ಮಯ್ಯ ವೃತ್ತದ ಕಡೆಯಿಂದ ರಾಜಭವನದೆಡೆಗೆ ಸಂಚರಿಸುವ ವಾಹನಗಳನ್ನು ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ನಗರ ಸಂಚಾರ ಪೊಲೀಸ್ ಇಲಾಖೆ ತಾತ್ಕಾಲಿಕ ನಿರ್ಬಂಧಿಸಿದೆ. ಸಮಾರಂಭಕ್ಕೆ ಮುಖ್ಯಮಂತ್ರಿಗಳು, ಸಭಾಪತಿಗಳು, ಶಾಸಕರು ಹಾಗೂ ಪಕ್ಷದ ನಾಯಕರು, ಕಾರ್ಯಕರ್ತರು, ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದರಿಂದ ಸಂಚಾರ ದಟ್ಟಣೆ ಪಡೆಯಲು ತಾತ್ಕಾಲಿಕವಾಗಿ ತಿಮ್ಮಯ್ಯ ಸರ್ಕಲ್ ಕಡೆಯಿಂದ ರಾಜಭವನದ ಕಡೆಗೆ ಸಂಚರಿಸುವ ವಾಹನಗಳನ್ನು ನಿರ್ಬಂಧಿಸಿ ಮಾರ್ಗ ಬದಲಾಯಿಸಲಾಗಿದೆ ಎಂದು ಸಂಚಾರ ವಿಭಾಗದ ಪೊಲೀಸರು ತಿಳಿಸಿದ್ದಾರೆ. 1. ಕ್ವೀನ್ಸ್ ರಸ್ತೆಯಲ್ಲಿ ಬಂದು ಹಾಗೂ ಶಿವಾಜಿನಗರದಿಂದ ಬಂದು ಮೆಜೆಸ್ಟಿಕ್ ಕಡೆಗೆ ಹಾಗೂ ಮಲ್ಲೇಶ್ವರಂ ಕಡೆಗೆ ಹೋಗುವ ಮಾರ್ಗ. ಕ್ವೀನ್ಸ್ ರಸ್ತೆ - ಬಾಳೆ ಕುಂದ್ರಿ ವೃತ್ತ - ಬಲ ತಿರುವು - ಕನ್ನಿಂಗ್ ಹ್ಯಾಂ ರಸ್ತೆ - ಚಂದ್ರಿಕಾ ಜಂಕ್ಷನ್ - ಎಡ ತಿರುವು - ಎಲ್.ಆರ್ಡಿ.ಇ ಜಂಕ್ಷನ್ - ಬಸವೇಶ್ವರ ವೃತ್ತ- ಪ್ಯಾಲೇಸ್ ರಸ್ತೆ - ಮಹಾರಾಣಿ ಅಂಡರ್ ಪಾಸ್ - ಮೈಸೂರ್ ಬ್ಯಾಂಕ್ ವೃತ್ತದ ಮೂಲಕ ಮೆಜೆಸ್ಟಿಕ್ ತಲುಪುವುದು ಕ್ವೀನ್ಸ್ ರಸ್ತೆ - ಬಾಳೆ ಕುಂದ್ರಿ ವೃತ್ತ - ಕನ್ನಿಂಗ್ ಹ್ಯಾಂ ರಸ್ತೆ - ಚಂದ್ರಿಕಾ ಜಂಕ್ಷನ್ - ಎಡ ತಿರುವು - ಎಲ್.ಆರ್ಡಿ.ಇ ಜಂಕ್ಷನ್ - ಬಸವೇಶ್ವರ ವೃತ್ತ - ರೇಸ್ ಕೋರ್ಸ್ರಸ್ತೆ - ಟ್ರಿಲೈಟ್ ಜಂಕ್ಷನ್ ಮುಳಕ ಮಲ್ಲೇಶ್ವರಂ ಕಡೆಗೆ ಹೋಗಬಹುದಾಗಿದೆ. 2. ಶಿವಾಜಿನಗರದಿಂದ / ಕ್ವೀನ್ಸ್ ರಸ್ತೆಯಲ್ಲಿ ಬರುವ ಎಲ್ಲಾ ರೀತಿಯ ವಾಹನಗಳು ಮೆಜೆಸ್ಟಿಕ್ ಕಡೆಗೆ ಹಾಗೂ ಸಿ.ಟಿ.ಮಾರ್ಕೆಟ್ ಕಡೆಗೆ ಹೋಗುವ ಮಾರ್ಗ: ಟ್ರಾಫಿಕ್ ಹೆಡ್ ಕ್ವಾರ್ಟರ್ ಜಂಕ್ಷನ್ - ಪಟ್ಟಾ ಜಂಕ್ಷನ್ - ಬಲ ತಿರುವು ಪೊಲೀಸ್ ತಿಮ್ಮಯ್ಯ ಜಂಕ್ಷನ್ - ಎಡತಿರುವು - ಡಾ: ಅಂಬೇಡ್ಕರ್ ರಸ್ತೆ - ಗೋಪಾಲಗೌಡ ವೃತ್ತ - ಕೆ.ಆರ್. ವೃತ್ತ - ಬಲ ತಿರುವು ಶೇಷಾದ್ರಿ ರಸ್ತೆ ಮೂಲಕ ಮೆಜೆಸ್ಟಿಕ್ ಕಡೆಗೆ ಹೋಗುವುದು. ಟ್ರಾಫಿಕ್ ಹೆಡ್ ಕ್ವಾರ್ಟರ್ ಜಂಕ್ಷನ್ - ಪಟ್ಟಾ ಜಂಕ್ಷನ್ - ಬಲ ತಿರುವು ಪೊಲೀಸ್ ತಿಮ್ಮಯ್ಯ ಜಂಕ್ಷನ್ - ಎಡತಿರುವು - ಡಾ: ಅಂಬೇಡ್ಕರ್ ರಸ್ತೆ - ಗೋಪಾಲಗೌಡ ವೃತ್ತ - ಕೆ.ಆರ್. ವೃತ್ತದ ಅಂಡರ್ ಪಾಸ್ ಮುಖಾಂತರ ನೃಪತುಂಗಾ ರಸ್ತೆ ಮುಲಕ ಮಾರ್ಕೆಟ್ ಕಡೆಗೆ ಹೋಗುವುದು ಟ್ರಾಫಿಕ್ ಹೆಡ್ ಕ್ವಾರ್ಟರ್ ಜಂಕ್ಷನ್ - ಸಿಟಿಓ - ಕ್ವೀನ್ಸ್ ವೃತ್ತ - ಬಲ ತಿರುವು - ಕಸ್ತೂರಿಬಾ ರಸ್ತೆ - ಸಿದ್ದಲಿಂಗಯ್ಯ ವೃತ್ತದ - ಮೂಲಕ ಮಾರ್ಕೆಟ್ ಕಡೆಗೆ ಹೋಗಬಹುದಾಗಿದೆ. 3. ಕ್ವೀನ್ಸ್ ರಸ್ತೆ / ಕಬ್ಬನ್ ರಸ್ತೆಗಳಲ್ಲಿ ಬರುವ ವಾಹನಗಳು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ಮಾರ್ಗ: ಕ್ವೀನ್ಸ್ ರಸ್ತೆ / ಕಬ್ಬನ್ ರಸ್ತೆಯಲ್ಲಿ ಬರುವ ವಾಹನಗಳು ಬಳ್ಳಾರಿ ರಸ್ತೆ ಹಾಗೂ ಅಂತರರಾಷ್ಟ್ರೀಯಾ ವಿಮಾನ ನಿಲ್ದಾಣಕ್ಕೆ ಹೋಗುವ ವಾಹನಗಳು - ಸಿಟಿಓ ವೃತ್ತ - ಪೊಲೀಸ್ ತಿಮ್ಮಯ್ಯ ವೃತ್ತ - ಬಲ ತಿರುವು - ಕಾಫಿ ಬೋರ್ಡ್ ವೃತ್ತ - ಬಾಳೆ ಕುಂದ್ರಿ ವೃತ್ತ - ಎಡ ತಿರುವು - ಕನ್ನಿಂಗ್ ಹ್ಯಾಂ ರಸ್ತೆ - ಚಂದ್ರಿಕಾ ಜಂಕ್ಷನ್ - ಬಲ ತಿರುವು - ಮಿಲ್ಲರ್ ರಸ್ತೆ - ಹಳೆ ಉದಯಾ ಟಿವಿ ಜಂಕ್ಷನ್ - ವಸಂತನರಗ ಅಂಡರ್ ಪಾಸ್ ಮೂಲಕ ಜೆ.ಸಿ ರಸ್ತೆ - ಮೇಕ್ರಿ ವೃತ್ತದ ಮೂಲಕ ಹೋಗಬಹುದಾಗಿದೆ. 4. ಕ್ವೀನ್ಸ್ ರಸ್ತೆ / ಕಬ್ಬನ್ ರಸ್ತೆಗಳಲ್ಲಿ ಬರುವ ವಾಹನಗಳು ಮೆಜೆಸ್ಟಿಕ್ / ಮಾರ್ಕೆಟ್ ಕಡೆಗೆ ಹೋಗುವ ಮಾರ್ಗ:ಕ್ವೀನ್ಸ್ ರಸ್ತೆ / ಕಬ್ಬನ್ ರಸ್ತೆಯಲ್ಲಿ ಬರುವ ವಾಹನಗಳು - ಸಿಟಿಓ ವೃತ್ತ - ಪೊಲೀಸ್ ತಿಮ್ಮಯ್ಯ ವೃತ್ತ - ಎಡ ತಿರುವು - ಡಾ: ಅಂಬೇಡ್ಕರ್ ರಸ್ತೆ - ಗೋಪಾಲಗೌಡ ವೃತ್ತ - ಕೆ.ಆರ್. ವೃತ್ತ - ಬಲ ತಿರುವು ಶೇಷಾದ್ರಿ ರಸ್ತೆ ಮೂಲಕ ಮೆಕೆಸ್ಟಿಕ್ ಕಡೆಗೆ ಹೋಗುವುದು. ಸಿಟಿಓ ವೃತ್ತ - ಪೊಲೀಸ್ ತಿಮ್ಮಯ್ಯ ಜಂಕ್ಷನ್ - ಎಡತಿರುವು - ಡಾ: ಅಂಬೇಡ್ಕರ್ ರಸ್ತೆ - ಗೋಪಾಲಗೌಡ ವೃತ್ತ - ಕೆ.ಆರ್. ವೃತ್ತದ ಅಂಡರ್ ಪಾಸ್ ಮುಖಾಂತರ ನೃಪತುಂಗಾ ರಸ್ತೆ ಮುಲಕ ಮಾಕರ್ೆಟ್ ಕಡೆಗೆ ಹೋಗುವಂತೆ ಸಂಚಾರ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.