ಸಮುದ್ರ ಮನೆ ಸೇರಿದ ಆಲಿವ್ ರಿಡ್ಲೆ ಕಡಲಾಮೆ ಮರಿಗಳು : ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾಯಿಂದ ಮರಿಗಳಿಗೆ ಸಾಗರ ದೀಕ್ಷೆ

Baby Olive Ridley sea turtles

ಕಾರವಾರ 06: ಆಲಿವ್ ರಿಡ್ಲೆ ಜಾತಿಯ 89 ಆಮೆ ಮರಿಗಳು ಬುಧುವಾರ ಸಂಜೆ ದೇವಭಾಗ ಕಡಲತೀರದಿಂದ ಸಮುದ್ರಕ್ಕೆ ಇಳಿದವು. ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ಖುದ್ದಾಗಿ ಹಾಜರಿದ್ದು, ಕಡಲಾಮೆ ಮರಿಗಳು ಕಡಲ ಸೇರುವ ತವಕವನ್ನು ವೀಕ್ಷಿಸಿದರು.  

ಅವರು ಸಹ ಕಡಲಾಮೆ ಮರಿಗಳನ್ನು ಸಮುದ್ರಕ್ಕೆ ಬಿಟ್ಟರು.ಡಿಸಿಎಫ್  ರವಿಶಂಕರ್ .ಸಿ. ಅವರು  ಕಡಲಾಮೆಗಳು ದಂಡೆಗೆ ಬಂದು ಮೊಟ್ಟೆಯನ್ನು ಮರಳಿನ ಆಳದಲ್ಲಿ ಮಿಚ್ಚಿಡುವ ಕ್ರಿಯೆಯನ್ನು ವಿವರಿಸಿದರು. ನಂತರ ಕೋಸ್ಟಲ್  ಮತ್ತು ಮರೈನ್ ಇಕೋ ಸಿಸ್ಟಮ್ ಸೆಲ್ ಕಾರವಾರ ವಲಯದ ವತಿಯಿಂದ ಕಡಲಾಮೆ ಮೊಟ್ಟೆಗಳನ್ನು ರಕ್ಷಿಸುವ ಬಗೆ ವಿವರಿಸಿದರು. ಮೊಟ್ಟೆ ಗಳಿಂದ ಮರಿಗಳು ಹೊರ ಬಂದ ನಂತರ ಅವುಗಳನ್ನು ಸುರಕ್ಷಿತವಾಗಿ  ಸಮುದ್ರಕ್ಕೆ  ಬಿಡುವ ಪದ್ಧತಿ ಇಲ್ಲಿದೆ.  ಬುಧುವಾರ ಸಂಜೆ 127 ಮೊಟ್ಟೆಗಳಲ್ಲಿ 89 ಮರಿಗಳು ಬಂದಿವೆ.  ಕಾರವಾರ ಅಂಕೋಲಾ ವ್ಯಾಪ್ತಿಯಲ್ಲಿ  ಇಲ್ಲಿಯವರಿಗೆ ಆಲೀವ್ ರಿಡ್ಲೆ ಆಮೆಗಳ  ಇಲ್ಲಿಯವರಿಗೆ 110 ಆಮೆಗಳ ಮೊಟ್ಟೆ ಗೂಡು ಮೊಟ್ಟೆ ಗೂಡು ರಕ್ಷಿಸುತ್ತಿರುವ ಬಗ್ಗೆ ಜಿಲ್ಲಾಧಿಕಾರಿಗೆ ವಿವರಿಸಿದರು. ಸಂದರ್ಭದಲ್ಲಿ ಜಿಲ್ಲಾಧಿಕಾರಿ  ಲಕ್ಷ್ಮೀಪ್ರಿಯಾ  ಆಲೀವ್ ರಿಡ್ಲೆ ಆಮೆಮರಿಗಳ ರಕ್ಷಣೆ ಮಾಡುವ ಇಲಾಖೆಯ ಶ್ರಮವನ್ನ ಸ್ಮರಿಸಿದರು.   

ಎ.ಸಿ.ಎಫ್,  ಕೆ.  ಡಿ.  ನಾಯ್ಕ್‌,  ಕಾರವಾರ ಉಪ ವಿಭಾಗ, ವಲಯ ಅರಣ್ಯಾಧಿಕಾರಿಗಳು, ಜಿಲ್ಲಾಧಿಕಾರಿ ಕಛೇರಿಯ ಅಧಿಕಾರಿಗಳಾದ  ಗಜಾನನ ನಾಯ್ಕ ಮತ್ತು ಕಿರಣ್ ಮನವಚಾರಿ  ಮತ್ತು ಸಿಬ್ಬಂದಿಗಳು, ಅರಣ್ಯ ಇಲಾಖೆಯ ಸಿಬ್ಬಂದಿಗಳು ಮತ್ತು ಮೀನುಗಾರರು ಸಹಯೋಗದೊಂದಿಗೆ ಕಡಲಾಮೆ ಮರಿಗಳನ್ನು ಸಮುದ್ರಕ್ಕೆ ಬಿಡಲಾಯಿತು....