ಬೆಂಗಳೂರು,
ಏ.5,ಭಾರತದ ಮಾಜಿ ಉಪಪ್ರಧಾನಿ ಬಾಬು ಜಗಜೀವನ ರಾಮ್ ಅವರ ಜನ್ಮದಿನದ ಅಂಗವಾಗಿ
ಮುಖ್ಯಮಂತ್ರಿ ಸೇರಿ ಅನೇಕ ಗಣ್ಯರು ಗೌರವ ಸಲ್ಲಿಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.
ಯಡಿಯೂರಪ್ಪ ಟ್ವೀಟ್ ಮಾಡಿ, ಬಡವರ ಹಸಿವು ನೀಗಿಸಿದ ಹಸಿರುಕ್ರಾಂತಿಯ ಹರಿಕಾರ, ಶೋಷಿತರ
ಹಕ್ಕಿಗಾಗಿ ಹೋರಾಡಿದ ನಾಯಕ, ಬಡವರ ಆಶಾಕಿರಣವಾಗಿ ಗುರುತಿಸಿಕೊಂಡು 'ಬಾಬೂಜಿ' ಎಂದೇ
ಹೆಸರಾದ ಬಾಬು ಜಗಜೀವನ ರಾಮ್ ಅವರ ಜಯಂತಿಯಂದು ದೇಶಕ್ಕೆ ಅವರು ನೀಡಿದ ಸ್ಫೂರ್ತಿದಾಯಕ
ಸೇವೆಯನ್ನು ಸ್ಮರಿಸೋಣ ಎಂದು ತಿಳಿಸಿದ್ದಾರೆ.ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್
ಮಾಡಿ, ಜಾತಿ,ಧರ್ಮ,ಭಾಷೆ,ಪ್ರದೇಶ- ಇವೆಲ್ಲಕ್ಕಿಂತಲೂ ಮೊದಲು ದೇಶ' ಎಂದು ಸಾರಿದ
ಅಪ್ರತಿಮ ದೇಶಭಕ್ತ, ಹಸಿರುಕ್ರಾಂತಿಯ ಹರಿಕಾರ, ದಮನಿತ ಸಮುದಾಯದ ಆತ್ಮವಿಶ್ವಾಸ
ಪ್ರತೀಕ,ಬಾಬು ಜಗಜೀವನ ರಾಮ್ ಅವರಿಗೆ ಹುಟ್ಟುಹಬ್ಬದ ದಿನದ ಗೌರವಪೂರ್ವಕ ನಮನಗಳು ಎಂದು
ತಿಳಿಸಿದ್ದಾರೆ.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮಾಡಿ, ಹಿರಿಯ
ಸ್ವಾತಂತ್ರ್ಯ ಹೋರಾಟಗಾರ, ಸಮಾಜ ಸುಧಾರಕ, ಹಸಿರು ಕ್ರಾಂತಿಯ ಹರಿಕಾರ, ರಾಷ್ಟ್ರನಾಯಕ,
ಮಾಜಿ ಉಪಪ್ರಧಾನಿ ಶ್ರೀ ಬಾಬು ಜಗಜೀವನರಾಮ್ ಜಯಂತಿಯಂದು ಅವರನ್ನು ಗೌರವದಿಂದ
ಸ್ಮರಿಸುತ್ತೇನೆ. ಶೋಷಿತರ ಹಕ್ಕಿಗಾಗಿ ಅವರು ಮಾಡಿದ ಹೋರಾಟ ಮತ್ತು ಅವರ ದೇಶಸೇವೆ ಸದಾ
ಸ್ಫೂರ್ತಿದಾಯಕ ಎಂದು ತಿಳಿಸಿದರು.