ಬೆಂಗಳೂರು, ಮೇ 25,ಇಂದು ಮುಸ್ಲಿಮರ ಪವಿತ್ರ ಹಬ್ಬ ರಂಜಾನ್ ಪ್ರಯುಕ್ತ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಸಚಿವರು ಮುಸ್ಲಿಂ ಬಾಂಧವರಿಗೆ ಶುಭಾಶಯ ಕೋರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು, ‘‘ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಹೃತ್ಪೂರ್ವಕ ಶುಭಕಾಮನೆಗಳು. ನಾಡಿಗೆ ಎದುರಾಗಿರುವ ಕೋವಿಡ್ ಸಂಕಷ್ಟಗಳು ಪರಿಹರಿಸಲಿ, ಎಲ್ಲರಿಗೂ ಸುಖ, ಶಾಂತಿ, ಸಮೃದ್ಧಿಯನ್ನು ದೇವರು ಕರುಣಿಸಲಿ ಎಂದು ಪ್ರಾರ್ಥಿಸೋಣ. ಎಲ್ಲರೂ ಮನೆಯೊಳಗೇ ಇದ್ದು, ಸುರಕ್ಷಿತವಾಗಿ ಹಬ್ಬವನ್ನು ಆಚರಿಸಿ. ಈದ್ ಮುಬಾರಕ್’’ ಎಂದು ಶುಭಾಶಯಗಳನ್ನು ತಿಳಿಸಿದ್ದಾರೆ.ಆರೋಗ್ಯ ಸಚಿವ ಬಿ ಶ್ರೀರಾಮುಲು ಅವರು, ಸಮಸ್ತ ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಹಾರ್ದಿಕ ಶುಭಾಶಯಗಳು.ಮನೆಗಳಲ್ಲಿಯೇ ಹಬ್ಬವನ್ನು ಆಚರಿಸೋಣ, ಕೊರೊನ ಹರಡುವಿಕೆ ತಡೆಗಟ್ಟೋಣ ಎಂದು ವಿನಂತಿಸಿಕೊಂಡಿದ್ದಾರೆ.ಇನ್ನು, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಅವರು, ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಹಾರ್ದಿಕ ಶುಭಾಶಯಗಳು. ಈದ್ ಹಬ್ಬವು ಎಲ್ಲರಿಗೂ ಸುಖ, ಸಂತೋಷ, ಆರೋಗ್ಯ, ಸಮೃದ್ಧಿಗಳನ್ನು ಅನುಗ್ರಹಿಸಲಿ ಎಂದು ಹಾರೈಸಿದ್ದಾರೆ.