ಬೆಂಗಳೂರು, ಮೇ 25, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸಾರ್ವಜನಿಕರಿಗೆ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸುವ ಸಲುವಾಗಿ ಕೊರೊನಾ ಹರಡುವಿಕೆಯನ್ನು ಕಡಿಮೆಮಾಡುವ ದೃಷ್ಟಿಯಿಂದ ಪಾಸುಗಳ ಹೊಂದಿದವರು ಸಾರಿಗೆ ವಾಹನದಲ್ಲಿ ಪ್ರಯಾಣಿಸಲು ಅವಕಾಶವನ್ನು ಕಲ್ಪಿಸಲಾಗಿತ್ತು. ಸಾರ್ವಜನಿಕರ ಬೇಡಿಕೆಯಂತೆ, ಪ್ಲಾಟ್ ದರದ ಬಗ್ಗೆ ಪ್ರಸ್ತಾಪನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಅದರಂತೆ, ಸರ್ಕಾರವು ಪ್ಲಾಟ್ ದರವನ್ನು ಪ್ರಯಾಣಿಕರಿಂದ ಪಡೆಯಲು ಒಪ್ಪಿಗೆಯನ್ನು ಸೂಚಿಸಿದ್ದು ಮೇ 26ರಿಂದ ಪ್ಲಾಟ್ ದರ ಕಾರ್ಯರೂಪಕ್ಕೆ ತರಲು ಬೆ.ಮ.ಸಾ.ಸಂಸ್ಥೆಯು ಸಿದ್ಧತೆಯನ್ನು ಮಾಡಿಕೊಂಡಿದೆ.ಅದರಂತೆ, 2 ಕಿ.ಮೀ.ವರೆಗೆ 5 ರೂಪಾಯಿ, 3ರಿಂದ 4 ಕಿ.ಮೀ.ವರೆಗೆ 10 ರೂ., 5ರಿಂದ 6 ಕಿ.ಮೀ.ವರೆಗೆ 15 ರೂ., 7ರಿಂದ 14 ಕಿ.ಮೀ.ವರೆಗೆ 20 ರೂ. ಹಾಗೂ 41 ಕಿ.ಮೀ.ನಿಂದ ಹಾಗೂ ಹೆಚ್ಚಿನ ದೂರದವರೆಗೆ 30 ರೂ. ದರ ನಿಗದಿಪಡಿಸಲಾಗಿದೆ.ಸಾರ್ವಜನಿಕ ಪ್ರಯಾಣಿಕರಿಗೆ ಚಿಲ್ಲರೆ ಕೊಟ್ಟು ಸಹಕರಿಸ ಬೇಕು. ಪ್ರಯಾಣಿಕರ ಹಿತದೃಷ್ಟಿಯಿಂದ, ಬೆ.ಮ.ಸಾ. ಸಂಸ್ಥೆಯ ಸಾರಿಗೆಯಲ್ಲಿ ಪ್ರಯಾಣಿಸುವಾಗ ತಪ್ಪದೆ ಮುಖಗವಸುಗಳನ್ನು ಖಡ್ಡಾಯವಾಗಿ ಧರಿಸಬೇಕು. ಪ್ರಯಾಣಿಕರು ಜನ ದಟ್ಟಣೆ ಆಗದಂತೆ ಸಹಕರಿಸಬೇಕು ಎಂದು ಸಂಸ್ಥೆ ಮನವಿ ಮಾಡಿದೆ.