ಬಿ.ಎಲ್‌.ಡಿ. ಸಂಸ್ಥೆಯ ಓಷಧೀಯ ವಿಜ್ಞಾನ, ಡಿ. ಫಾರ್ಮ್‌ ವಿದ್ಯಾರ್ಥಿಗಳು ಶ್ರೀವನಕ್ಕೆ ಭೇಟಿ

BLD Institute of Pharmaceutical Sciences, D. Pharm students visit Srivan

ಬಿ.ಎಲ್‌.ಡಿ. ಸಂಸ್ಥೆಯ ಓಷಧೀಯ ವಿಜ್ಞಾನ, ಡಿ. ಫಾರ್ಮ್‌ ವಿದ್ಯಾರ್ಥಿಗಳು ಶ್ರೀವನಕ್ಕೆ ಭೇಟಿ 

ವಿಜಯಪುರ, 04:  ನಗರದ ಬಿ.ಎಲ್‌.ಡಿ. ಈ ಸಂಸ್ಥೆಯ ಶ್ರೀ ಸಂಗನಬಸವ ಮಹಾಸ್ವಾಮೀಜಿ ಓಷಧೀಯ ವಿಜ್ಞಾನ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಡಿ. ಫಾರ್ಮ್‌ ವಿದ್ಯಾರ್ಥಿಗಳು ಎವಿಎಸ್ ಆಯುರ್ವೇದ ಮಹಾವಿದ್ಯಾಲಯದ ಶ್ರೀವನಕ್ಕೆ ಭೇಟಿ ನೀಡಿ ಕ್ಷೇತ್ರ ಅಧ್ಯಯನ ನಡೆಸಿದರು. ಶುಕ್ರವಾರ ಎವಿಎಸ್ ಆಯುರ್ವೇದ ಕಾಲೇಜಿಗೆ ತೆರಳಿದ ವಿದ್ಯಾರ್ಥಿಗಳು, ಭಾರತೀಯ ಓಷಧ ಪರಿಷತ್ತಿನ ಡಿಪ್ಲೊಮಾ ಕೋರ್ಸಿನ ಶೈಕ್ಷಣಿಕ ಚಟುವಟಿಕೆ ಭಾಗವಾಗಿ ಈ ಭೇಟಿ ನೀಡಿದರು.  ಈ ಮೂಲಕ ಸೈಸರ್ಗಿಕ ಜಗತ್ತಿನ ಅನುಭವ ಪಡೆದುಕೊಂಡರು.   ನಾನಾ ಓಷಧೀಯ ಸಸ್ಯಗಳನ್ನು ವೀಕ್ಷಿಸಿದ ತರಗತಿಯ ಕೊಠಡಿಗಳಲ್ಲಿ ತಾವು ಪುಸ್ತಕಗಳಲ್ಲಿ ಓದಿದ ವಿಷಯ ಮತ್ತು ಇಲ್ಲಿ ನಿಸರ್ಗದಲ್ಲಿರುವ ಓಷಧಿಯ ಸಸ್ಯಗಳ ಕುರಿತು ಮನನ ಮಾಡಿಕೊಂಡರು.   ಎವಿಎಸ್ ಆಯುರ್ವೇದ ಕಾಲೇಜಿನ ಶ್ರೀವನದ ಅಧಿಕಾರಿ ಡಾ. ಗುರುದೇವಿ ಪಾಟೀಲ ಅವರು ವಿದ್ಯಾರ್ಥಿಗಳಿಗೆ ನಾನಾ ಬಗೆಯ ಓಷಧೀಯ ಸಸ್ಯಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು.   ಈ ಸಂದರ್ಭದಲ್ಲಿ ಓಷಧೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಸಿ. ಮಲ್ಲಿಕಾರ್ಜುನ ಶೆಟ್ಟಿ, ನೈಸರ್ಗಿಕ ಓಷಧ ವಿಜ್ಞಾನ ವಿಭಾಗದ ಡಾ. ಬಸವರಾಜ ಹುನಸಗಿ, ಸಹಾಯಕ ಪ್ರಾಧ್ಯಾಪಕ ಅಜಯ ಶಹಾಪುರ, ಸಂದೀಪ ಉಮರಾಣಿ, ಶಿವರಾಜ ಕಾಪಸೆ ಮುಂತಾದವರು ಉಪಸ್ಥಿತರಿದ್ದರು.