ಮಹಾ ವಿಧಾನಸಭಾ ಚುನಾವಣೆ : ಅ 15 ರಂದು ಬಿಜೆಪಿ ಪ್ರಣಾಳಿಕೆ ಬಿಡುಗಡೆ

ಮುಂಬೈ, ಅ 15:     ಮಹಾರಾಷ್ಟ್ರದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಆಡಳಿತಾರೂಢ ಬಿಜೆಪಿ ಅ 15 ರಂದು ಪ್ರಣಾಳಿಕೆ ಬಿಡುಗಡೆ ಮಾಡಲಿದೆ.  ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮುಂಬೈನಲ್ಲಿ ಅ 15 ರ ಬೆಳಗ್ಗೆ ಪಕ್ಷದ ಸಂಕಲ್ಪ ಪತ್ರ ಬಿಡುಗಡೆ ಮಾಡಲಿದ್ದಾರೆ.  ಅ 21 ರಂದು ರಾಜ್ಯದ 288 ಸದಸ್ಯಬಲದ ವಿಧಾನಸಭೆಗೆ ಮತದಾನ ನಡೆಯಲಿದೆ. ಮತ ಎಣಿಕೆ ಅ 24 ರಂದು ನಡೆಯಲಿದೆ. ಹರಿಯಾಣ ವಿಧಾನಸಭೆಗೂ ಇದೇ ದಿನದಂದು ನಡೆಯಲಿರುವ ಮತದಾನಕ್ಕೆ ಬಿಜೆಪಿ ಕಳೆದ ಭಾನುವಾರವಷ್ಟೇ ಸಂಕಲ್ಪ ಪತ್ರ ಬಿಡುಗಡೆ ಮಾಡಿದೆ.