ರಾಣೇಬೆನ್ನೂರು: ಜೂ.10: ಜೂನ್ ತಿಂಗಳಿನಲ್ಲಿ ನಡೆಯಲೇಬೇಕಾಗಿದ್ದ ರಾಜ್ಯದ ಪದವೀಧರ ಹಾಗೂ ಶಿಕ್ಷಕರ ಚುನಾವಣೆಯನ್ನು ಕೋವಿಡ್ ಕಾರಣ ನೀಡಿ ಮುಂದೂಡಿರುವುದು ಬಿಜೆಪಿ ಹಾಗೂ ಚುನಾವಣಾ ಆಯೋಗದ ತಾರತಮ್ಯ ನೀತಿಯಾಗಿದ್ದು ಯಾವುದೇ ಸಕರ್ಾರಕ್ಕೆ ಈ ಕ್ರಮ ಗೌರವದ ನಡೆಯಲ್ಲ ಎಂದು ಕೆಪಿಸಿಸಿ ಶಿಕ್ಷಕರು ಹಾಗೂ ಪದವಿಧರ ಘಟಕದ ರಾಜ್ಯಾಧ್ಯಕ್ಷ ಡಾ|| ಆರ್.ಎಂ. ಕುಬೇರಪ್ಪ ಖಂಡಿಸಿದ್ದಾರೆ.
ಪದವೀಧರ ಮತ್ತು ಶಿಕ್ಷಕರ ಮತ ಕ್ಷೇತ್ರಗಳಲ್ಲಿ ಮತದಾರರ ಸಂಖ್ಯೆ ತುಂಬಾ ಕಡಿಮೆ ಇದ್ದು, ಪ್ರತಿಯೊಂದು ಮತಗಟ್ಟೆಗಳಲ್ಲಿ 150 ರಿಂದ 500 ಮತದಾರರಿದ್ದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ನಡೆಯುವ ಮತದಾನದಲ್ಲಿ ವಿದ್ಯಾವಂತ ಮತದಾರರು 3-4 ಜನರಿಗಿಂತ ಹೆಚ್ಚು ಮತಗಟ್ಟೆಗೆ ಬರುವ ಅವಕಾಶವೇ ಇಲ್ಲ.
ಕೋವಿಡ್ ನಿಯಮಗಳನ್ನು ಎಲ್ಲೂ ಉಲ್ಲಂಘನೆ ಮಾಡುವ ಪ್ರಶ್ನೆಯೇ ಬರುವುದಿಲ್ಲ. ಕೋವಿಡ್ ಕಾರಣ ನೀಡಿ ಈ ಚುನಾವಣೆಯನ್ನು ಮಾತ್ರ ಮುಂದೂಡಿರುವುದನ್ನು ನೋಡಿದರೆ ಬಿಜೆಪಿಗೆ ಈ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿಲ್ಲದ ಕಾರಣ ಕುಂಟು ನೆಪವೊಡ್ಡಿ ಚುನಾವಣೆ ಮುಂದೂಡಿರುವುದು ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನೇ ಅಣಕಿಸುವಂತಿದೆ ಎಂದು ವ್ಯಂಗ್ಯವಾಡಿದ್ದಾರೆ.
ಚುನಾವಣಾ ಆಯೋಗದವರು, ರಾಜ್ಯಸಭಾ ಚುನಾವಣೆಗೆ ಅನುಮತಿ ನೀಡಿದ್ದಾರೆ, ವಿಧಾನ ಪರಿಷತ್ತಿನ ಶಾಸಕರಿಂದ ಚುನಾಯಿತರಾಗುವ ಚುನಾವಣೆಗೆ ಅನುಮತಿ ನೀಡಿದ್ದಾರೆ.
ರಾಜ್ಯದ ಆರೋಗ್ಯ ಸಚಿವರು ಸಾವಿರಾರು ಕಾರ್ಯಕರ್ತರೊಡಗೂಡಿ, ಸೇಬುಹಣ್ಣಿನ ಹಾರದ ಜೊತೆಗೆ ಮೆರವಣಿಗೆ ಮಾಡುತ್ತಿರುವುದು. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಗನ ಮದುವೆಗೆ ಸಕರ್ಾರ ಅನುಮತಿ ನೀಡಿ, ಡಿ.ಕೆ. ಶಿವಕುಮಾರ್ರವರ ಅಧಿಕಾರ ಪದಗ್ರಹಣಕ್ಕೆ ಅನುಮತಿ ನಿರಾಕರಿಸುತ್ತಿರುವುದು ಯಾವ ನ್ಯಾಯ?
ತಮಗೆ ಬೇಕಾದ ಚುನಾವಣೆಗೆ ಅನುಮತಿ ನೀಡುವುದು, ಬೇಡವಾದ ಚುನಾವಣೆಯನ್ನು ಕೋವಿಡ್ ನೆಪ ಹೇಳಿ ಮುಂದೂಡುವುದು ಯಾವುದೇ ಸಕರ್ಾರಕ್ಕೆ ಮಯರ್ಾದೆ ತರುವಂತಹ ಕೆಲಸವಲ್ಲ. ಜುಲೈ ತಿಂಗಳಲ್ಲಿ ಯಾವುದೇ ಕಾರಣಕ್ಕೂ ವಿಧಾನ ಪರಿಷತ್ ಚುನಾವಣೆ ನಡೆಸುವಂತೆ ಕ್ರಮಕೈಗೊಳ್ಳಲು ಡಾ|| ಕುಬೇರಪ್ಪ ಮುಖ್ಯಮಂತ್ರಿಗಳಿಗೆ ಹಾಗೂ ರಾಜ್ಯ ಮತ್ತು ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದು ಆಗ್ರಹಿಸಿದ್ದಾರೆ.