ಅಖಿಲೇಶ್ ಹತ್ಯೆಗೆ ಬಿಜೆಪಿ ಸಂಚು : ವಿಧಾನ ಮಂಡಲದಲ್ಲಿ ಭಾರಿ ಕೋಲಾಹಲ

ಲಕ್ನೋ, ಫೆ 17, ಸಮಾಜವಾದಿ  ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರಿಗೆ ಜೀವ ಬೆದರಿಕೆ  ಹಾಕಿರುವ ವಿಚಾರ  ವಿಧಾನಮಂಡಲದ ಎರಡೂ  ಸದಸನಲ್ಲಿ ಭಾರಿ  ಕೋಲಾಹಲ, ಅಡಚಣೆಗೆ ದಾರಿಯಾಗಿ ಕೆಲ ಕಾಲ ಕಲಾಪ   ಮುಂದೂಡಿದ ಪ್ರಸಂಗ ಜರುಗಿತು. ವಿಧಾನಸಭೆ  ಮತ್ತು  ಪರಿಷತ್ ಎರಡೂ  ಸದನದಲ್ಲಿ  ಈ ವಿಷಯ ಭಾರಿ ಕೋಲಾಹಲ ಎಬ್ಬಿಸಿ ಆಡಳಿತ  - ಮತ್ತು ವಿರೋಧಿ ಸದಸ್ಯರ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು.  ವಿಧಾನ ಪರಿಷತ್ತಿನ ಕಲಾಪವನ್ನು ಇದೇ   ಕಾರಣಕ್ಕಾಗಿ  ಮುಂದೂಡಲಾಯಿತು.

ವಿಧಾನಸಭೆ ಬೆಳಿಗ್ಗೆ  ಪ್ರಾರಂಭವಾಗುತ್ತಿದ್ದಂತೆ ಎಸ್ಪಿ ಸದಸ್ಯರು ಮನೆಯ ಸದಸನದ ಬಾವಿಗೆ  ಜಮಾಯಿಸಿ  ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರಿಗೆ ಮೊಬೈಲ್ ಮೂಲಕ  ಜೀವ ಬೆದರಿಕೆ ಹಾಕಲಾಗಿದೆ ಎಂದು ಪ್ರತಿಪಕ್ಷದ ನಾಯಕ ರಾಮ್ ಗೋವಿಂದ್ ಚೌಧರಿ ಆರೋಪಿಸಿ, ವಿಷಯ ಪ್ರಸ್ತಾಪಿಸಿದರು. ಬಿಜೆಪಿ ಮತ್ತು ಯುಪಿ ಸರ್ಕಾರ ತಮ್ಮ ನಾಯಕನ ಹತ್ಯೆಗೆ ಪ್ರಯತ್ನಿಸುತ್ತಿದೆ ಮತ್ತು ಎಸ್ಪಿ ರಾಜಕೀಯ ಸಭೆಗಳಿಗೆ  ಅಡ್ಡಿಪಡಿಸುತ್ತಿದೆ ಎಂದೂ  ಅವರು ಆರೋಪಿಸಿದರು.ರಾಜ್ಯದ ಮಾಜಿ ಮುಖ್ಯಮಂತ್ರಿಯೂ ಆಗಿರುವ ಅಖಿಲೇಶ್ ಯಾದವ್ ಅವರ ಬಗ್ಗೆ ಎಲ್ಲರಿಘಿ ಗೌರವಿದೆ  ಎಂದು ರಾಜ್ಯ ಸಂಸದೀಯ ವ್ಯವಹಾರಗಳ ಸಚಿವ ಸುರೇಶ್ ಕುಮಾರ್ ಖನ್ನಾ ಸ್ಪಷ್ಟಪಡಿಸಲು ಯತ್ನಿಸಿದರು.   ಸಮಾಜವಾದಿ ಪಕ್ಷದಿಂದ ಬೆದರಿಕೆ ಎದುರಿಸುತ್ತಿದೆ ಅಖಿಲೇಶ್  ಯಾದವ್ ಮಾತ್ರವಲ್ಲ  ಎಂದು ಸದಸ್ಯರು ಆರೋಪಿಸುತ್ತಿದ್ದಾರೆ ಎಂದು ಖನ್ನಾ ಹೇಳಿದರು.ಸ್ಪೀಕರ್ ಹರ್ ದಿಯಾ  ನರೈನ್ ದೀಕ್ಷಿತ್ ಅವರು ಸದಸ್ಯರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರೂ ಸದಸ್ಯರು ಸಮಾಧಾನಗೊಳ್ಳದ ಕಾರಣ ಕಲಾಪವನನ್ಉಇ ಮೊದಲಿಗೆ 5 ನಿಮಿಷ ನಂತರವೂ ಪರಿಸ್ಥಿತಿ  ಬದಲಾಗದ ಕಾರಣ  30 ನಿಮಿಷಗಳ ಕಾಲ  ಮುಂದೂಡಿದರು.ಕಲಾಪ ಮುಂದೂಡಿಕೆ ನಂತರವೂ  ಎಸ್ಪಿ ಸದಸ್ಯರು  ಬಾವಿಯಲ್ಲೇ  ಧರಣಿ ಕುಳಿತುತಿದ್ದರು.