ದೇಶದ ಅಭಿವೃದ್ಧಿಯೇ ಬಿಜೆಪಿ ಮಂತ್ರ : ಶಾಸಕ ಸವದಿ

ಲೋಕದರ್ಶನವರದಿ

ರಬಕವಿ-ಬನಹಟ್ಟಿ 03: ದೇಶದ ಅಭಿವೃದ್ಧಿಯೇ ಬಿಜೆಪಿಯ ಮಂತ್ರವಾಗಿದೆ. ಬಡವರ, ರೈತರ, ಯುವಕರ, ಮಹಿಳೆಯರ ಕಾಳಜಿಯ ಅಭಿವೃದ್ಧಿ ಕಾರ್ಯಗಳಿಂದ ಬಿಜೆಪಿ ಜನ ಸಾಮಾನ್ಯ ಪಕ್ಷವಾಗಿದೆ. ಇಡೀ ವಿಶ್ವದಲ್ಲಿಯೇ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಏಕೈಕ ಪಕ್ಷವಾಗಿದ ಕೀತರ್ಿ ಬಿಜೆಪಿಯದಾಗಿದೆ ಎಂದು ಬಾಗಲಕೋಟೆ ಜಿಲ್ಲೆಯ ಬಿಜೆಪಿ ಅಧ್ಯಕ್ಷ ಹಾಗೂ ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಕ. ಸವದಿ ಹೇಳಿದರು.

ರಬಕವಿ-ಬನಹಟ್ಟಿ ತಾಲೂಕಿನ ಯಲ್ಲಟ್ಟಿಯ ನಿರುಪಾಧೀಶ್ವರ ಮಠದಲ್ಲಿ ತೇರದಾಳ ಮತಕ್ಷೇತ್ರದ ಬಿಜೆಪಿಯ ಸದಸ್ಯತ್ವ  ಅಭಿಯಾನದ ಪೂರ್ವಭಾವಿ ಸಭೆಯಲ್ಲಿ ಮಾತನಾಡುತ್ತಾ, ಮೊನ್ನೆ ನಡೆದ ಲೋಕಸಭಾ ಚುನಾವಣೆಯಲ್ಲಿ ಬಾಗಲಕೋಟೆ ಕ್ಷೇತ್ರದಲ್ಲಿ ಅತಿ ಹೆಚ್ಚು ಮತಗಳನ್ನು ಬಿಜೆಪಿಗೆ ನೀಡಿದ ಕೀತರ್ಿ ತೇರದಾಳ ಮತಕ್ಷೇತ್ರದಾಗಿದೆ. ಕಳೆದ ಬಾರಿ ನಡೆದ ಸದಸ್ಯತ್ವ ಅಭಿಯಾನದಲ್ಲಿ 80 ಸಾವಿರಕ್ಕೂ ಅಧಿಕ ಸದಸ್ಯರು ತೇರದಾಳ ಮತಕ್ಷೇತ್ರದಲ್ಲಿ ಸೇರ್ಪಡೆಯಾಗಿದ್ದು. ಬಿಜೆಪಿ ಕಾರ್ಯಕರ್ತರ ಶ್ರಮದಿಂದ ಈ ಬಾರಿಯೂ ಅಧಿಕ ಸದಸ್ಯರನ್ನು ಹೊಂದಲಿದೆ ಎಂದು ಶಾಸಕರು ಹೇಳಿದರು.

ದೀನ ದಯಾಳರ ಜನ್ಮ ದಿನದಂದು ಪ್ರಾರಂಭಗೊಳ್ಳಲಿರುವ ಸದಸ್ಯತ್ವ ಅಭಿಯಾನ, ಆಗಸ್ಟ್ 8 ರಂದು ಮುಕ್ತಾಯವಾಗಲಿದೆ. ತೇರದಾಳ ಮತಕ್ಷೇತ್ರದ ಪ್ರತಿಯೊಂದು ಬೂತ, ಮಂಡಲ, ಶಕ್ತಿಕೇಂದ್ರದ ಸದಸ್ಯರು ಸದಸ್ಯತ್ವ ಅಭಿಯಾನದಲ್ಲಿ ಅತಿ ಹೆಚ್ಚು ಸದಸ್ಯರನ್ನು ಸೇರ್ಪಡೆ ಮಾಡುವಲ್ಲಿ ತೊಡಗಬೇಕು ಎಂದು ಸವದಿ ಹೇಳಿದರು.

ಅಭಿಯಾನ ಕಾರ್ಯಕ್ರಮದಲ್ಲಿ ಜಿ.ಪಂ. ಮಾಜಿ ಸದಸ್ಯ ದೇವಲಸರಕಾರ ದೇಸಾಯಿ, ಮಾಜಿ ವಿಧಾನ ಪರಿಷತ್ ಸದಸ್ಯ ಜಿ.ಎಸ್.ನ್ಯಾಮಗೌಡ, ಮಹಾಂತೇಶ ಹಿಟ್ಟಿನಮಠ, ಭೀಮಶಿ ಮಗದುಮ್ಮ, ಬನಹಟ್ಟಿ ಬಿಜೆಪಿ ಘಟಕದ ಅಧ್ಯಕ್ಷ ರಾಜು ಅಂಬಲಿ, ಸುರೇಶ ಅಕ್ಕಿವಾಟ, ತೇರದಾಳ ಗ್ರಾಮೀಣ ಘಟಕದ ಪ್ರಧಾನ ಕಾರ್ಯದಶರ್ಿ ಆನಂದ ಕಂಪು, ಪರಪ್ಪ ಉರಭಿನವರ, ಬಸವರಾಜ ತೆಗ್ಗಿ, ಬಸನಗೌಡ ಪಾಟೀಲ, ಮಹಾಲಿಂಗ ಕುಲ್ಲೊಳಿ ಮುಂತಾವದರು ವೇದಿಕೆ ಮೇಲಿದ್ದರು ತೇರದಾಳ ಮತಕ್ಷೇತ್ರದ ಬಿಜೆಪಿಯ ಚುನಾಯಿತ ಪ್ರತಿನಿಧಿಗಳು, ವಿವಿಧ ಮೋಚರ್ಾಗಳ ಪದಾಧಿಕಾರಿಗಳು ಸೇರಿದಂತೆ ಸಾವಿರಕ್ಕೂ ಅಧಿಕ ಕಾರ್ಯಕರ್ತರು ಉಪಸ್ಥಿತರಿದ್ದರು.