ಬಿಮ್ಸ್ ನಿರ್ದೇಶಕ ವಿನಯ ದಾಸ್ತಿಕೊಪ್ಪ ಹೋಮ್ ಕ್ವಾರಂಟೈನ್

ಬೆಳಗಾವಿ, ಜುಲೈ 14: ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಅನಿಲ್ ಬೆನಕೆ, ಬೆಳಗಾವಿ ಬಿಮ್ಸ್ ನಿರ್ದೇಶಕ ವಿನಯ ದಾಸ್ತಿಕೊಪ್ಪ ಅವರಲ್ಲಿ ಕೊರೊನಾ ಸೋಂಕು ಲಕ್ಷಣಗಳು ಕಾಣಿಸಿಕೊಂಡಿದ್ದು, ಇಬ್ಬರೂ ಹೋಮ್ ಕ್ವಾರಂಟೈನ್‍ನಲ್ಲಿದ್ದಾರೆ.

ಅನಿಲ್ ಬೆನಕೆ ಅವರಿಗೆ  ನಾಲ್ಕು ದಿನಗಳಿಂದ ಸೋಂಕಿನ ಲಕ್ಷಣ ಕಂಡುಬಂದಿವೆ. ಸೋಮವಾರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಶಾಸಕರು ಮನೆಯಲ್ಲೇ ಇದ್ದರು. ಆದರೆ ಕೊರೋನಾ ಸೋಂಕಿನ ಲಕ್ಷಣ ಹಿನ್ನೆಲೆಯಲ್ಲಿ ಅವರು ಹೋಮ್ ಕ್ವಾರಂಟೈನ್‍ಗೆ ತೆರಳಿದ್ದಾರೆ. ಕೊರೋನಾ ಸಂದರ್ಭದಲ್ಲಿ ಶಾಸಕ ಅನಿಲ ಬೆನಕೆ ಬಿಡುವಿಲ್ಲದೇ  ಕ್ಷೇತ್ರದಲ್ಲಿ ವ್ಯಾಪಕ ಸಂಚಾರ ಕೈಗೊಂಡಿದ್ದರು. ಲಾಕ್‍ಡೌನ್ ಸಂದರ್ಭದಲ್ಲೂ ಜನರೊಂದಿಗೆ ಸತತ ಸಂಪರ್ಕದಲ್ಲಿದ್ದರು.

ಬೆಳಗಾವಿ ಬಿಮ್ಸ್ ನಿರ್ದೇಶಕ ಡಾ.ವಿನಯ ದಾಸ್ತಿಕೊಪ್ಪ ಅವರಿಗೂ ಕೊರೋನಾ ಲಕ್ಷಣಗಳು ಕಂಡು ಬಂದಿವೆ. ಇದರಿಂದ ಅವರೂ ನಾಲ್ಕು ದಿನ ಹೋಮ್ ಕ್ವಾರಂಟೈನ್‍ನಲ್ಲಿದ್ದಾರೆ. ಹನುಮಾನ ನಗರ ಬಡಾವಣೆಯ ವೈದ್ಯರಿಗೆ ಸೋಂಕು ಹಿನ್ನೆಲೆಯಲ್ಲಿ ಅವರ ಸಂಪರ್ಕದಲ್ಲಿದ್ದ ಡಾ.ದಾಸ್ತಿಕೊಪ್ಪ ಅವರಿಗೂ ಸೋಂಕಿನ ಲಕ್ಷಣಗಳು ಕಂಡು ಬಂದಿವೆ ಎನ್ನಲಾಗಿದೆ.