ವೆಲ್ಲಿಂಗ್ಟನ್, ಫೆ 19,ಭಾರತ ತಂಡದ ವೇಗಿ ಜಸ್ಪ್ರಿತ್ ಬುಮ್ರಾ ಅವರು ನ್ಯೂಜಿಲೆಂಡ್ ತಂಡಕ್ಕೆ ಆಘಾತ ನೀಡಬಲ್ಲರು ಹಾಗೂ ಹಿರಿಯ ವೇಗಿ ಇಶಾಂತ್ ಶಮರ್ಾ ಅವರು ತಂಡಕ್ಕೆ ಮರಳಿರುವುದರಿಂದ ಟೀಮ್ ಇಂಡಿಯಾ ಬೌಲಿಂಗ್ ವಿಭಾಗ ಇನ್ನಷ್ಟು ಬಲಿಷ್ಠವಾಗಿದೆ ಎಂದು ಕಿವೀಸ್ ತಂಡದ ಹಿರಿಯ ಬ್ಯಾಟ್ಸ್ ಮನ್ ರಾಸ್ ಟೇಲರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಳೆದ ಏಕದಿನ ಸರಣಿಯಲ್ಲಿ ಜಸ್ಪ್ರಿತ್ ಬುಮ್ರಾ ಅವರು ಒಂದೇ ಒಂದು ವಿಕೆಟ್ ಪಡೆದಿದ್ದರು. ಆದರೆ, ಅವರ ಬೌಲಿಂಗ್ ನಲ್ಲಿನ ಲೈನ್ ಅಂಡ್ ಲೆನ್ತ್ ಅದ್ಭುತವಾಗಿತ್ತು. ಇಶಾಂತ್ ಶಮರ್ಾ ಬೌಲಿಂಗ್ ವಿಭಾಗಕ್ಕೆ ಸೇರ್ಪಡೆಯಾಗಿರುವುದರಿಂದ ಭಾರತ ಇನ್ನಷ್ಟು ಬಲಿಷ್ಟವಾಗಿದೆ. ಆದರೂ, ಭಾರತ ತಂಡದ ಸವಾಲನ್ನು ಎದುರಿಸಲು ನಾವು ನಮ್ಮ ಯೋಜನೆಗಳ ಮೇಲೆ ನಿಲ್ಲುತ್ತೇವೆ ಎಂದು ಟೇಲರ್ ಹೇಳಿದ್ದಾರೆ.
ಬುಮ್ರಾ ನಮಗೆ ತೊಂದರೆ ನೀಡಬಹುದು. ಇಶಾಂತ್ ಶಮರ್ಾ ಆಗಮನದೊಂದಿಗೆ ಪ್ರವಾಸಿ ತಂಡದ ಬೌಲಿಂಗ್ ಲೈನ್ ಅಪ್ ಅದ್ಭುತವಾಗಿದೆ. ವಿಶ್ವದ ದಜರ್ೆಯ ಬ್ಯಾಟ್ಸ್ ಮನ್ ಗಳನ್ನು ಭಾರತ ಹೊಂದಿದೆ. ಆದರೆ, ನಾವು ನಮ್ಮ ನೈಜ ಪ್ರದರ್ಶನದ ಮೂಲಕ ಅವರನ್ನು ಎದುರಿಸುತ್ತೇವೆ, ಎಂದು ತಿಳಿಸಿದರು. ಭಾರತ ತಂಡ ನ್ಯೂಜಿಲೆಂಡ್ ಪ್ರವಾಸದ ಆರಂಭದಲ್ಲಿ ಟಿ-20 ಸರಣಿಯಲ್ಲಿ 5-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿಕೊಂಡಿತ್ತು. ಬಳಿಕ ಏಕದಿನ ಸರಣಿಯಲ್ಲಿ ನ್ಯೂಜಿಲೆಂಡ್ 3-0 ಅಂತರದಲ್ಲಿ ಭಾರತವನ್ನು ಸೋಲಿಸಿತ್ತು. ಇದೀಗ ಶುಕ್ರವಾರದಿಂದ ಆರಂಭವಾಗುವ ಎರಡು ಪಂದ್ಯಗಳ ಟೆಸ್ಟ್ ಸರಣಿ ತೀವ್ರ ಕುತೂಹಲ ಕೆರಳಿಸಿದೆ. ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಅಂಕಪಟ್ಟಿಯಲ್ಲಿ ಭಾರತ 360 ಪಾಯಿಂಟ್ ಗಳೊಂದಿಗೆ ಅಗ್ರ ಸ್ಥಾನದಲ್ಲಿದೆ. ನ್ಯೂಜಿಲೆಂಡ್ 60 ಅಂಕಗಳೊಂದಿಗೆ ಆರನೇ ಸ್ಥಾನದಲ್ಲಿದೆ. ಮೊದಲನೇ ಟೆಸ್ಟ್ ಪಂದ್ಯ ನಡೆಯುವ ಬೇಸಿನ ರಿವರ್ ಪಿಚ್ ಬಗ್ಗೆ ಮಾತನಾಡಿದ ಟೇಲರ್, ಇಲ್ಲಿನ ಪಿಚ್ ಮೊದಲ ದಿನ ಚೆಂಡು ಹೆಚ್ಚಿನ ಚಲನೆಯನ್ನು ಹೊಂದಿರುತ್ತದೆ. ಇದರ ಹೊರತಾಗಿ ಭಾರತದ ಬ್ಯಾಟಿಂಗ್ ಹಾಗೂ ಬೌಲಿಂಗ್ ದಾಳಿ ವಿಶ್ವ ದಜರ್ೆಯ ಮಟ್ಟವನ್ನು ಹೊಂದಿದೆ ,' ಎಂದು ಉಲ್ಲೇಖಿಸಿದರು.