ಕೋಲ್ಕತಾ, ಮಾ.7, ಮೊದಲ ಸೆಮಿಫೈನಲ್ಸ್ ಪಂದ್ಯದಲ್ಲಿ ಗೆಲುವು ದಾಖಲಿಸಿರುವ ಬೆಂಗಳೂರು ಫುಟ್ಬಾಲ್ ಕ್ಲಬ್ (ಬಿಎಫ್ಸಿ) ಎದುರಾಳಿ ತವರಿನಲ್ಲಿ ನಡೆಯಲಿರುವ ಮತ್ತೊಂದು ಸೆಮಿಫೈನಲ್ಸ್ ನಲ್ಲಿ ಎಟಿಕೆ ವಿರುದ್ಧ ಕಾದಾಟ ನಡೆಸಲಿದ್ದು, ಗೆಲುವಿನ ಕನಸು ಕಾಣುತ್ತಿದೆ. ಈ ಪಂದ್ಯವನ್ನು ಗೆದ್ದು ಬೆಂಗಳೂರು ತಂಡ, ಮತ್ತೊಮ್ಮೆ ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆಯುವ ಕನಸು ಕಾಣುತ್ತಿದೆ. ಈ ಪಂದ್ಯದಲ್ಲಿ ಬೆಂಗಳೂರು ಡ್ರಾ ಸಾಧಿಸಿದರೂ ಮುಂದಿನ ಹಂತಕ್ಕೆ ಹೋಗುವುದು ಖಚಿತ.
ಬೆಂಗಳೂರು ತಂಡದಲ್ಲಿ ಸ್ಟಾರ್ ಆಟಗಾರರು ಇದ್ದು ತಂಡಕ್ಕೆ ನೆರವಾಗಬಲ್ಲರು. ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ಅನುಭವ ಹೊಂದಿರುವ ಸುನಿಲ್ ಛೆಟ್ರಿ ಆಕ್ರಮಣಕಾರಿ ಆಟದ ಮೂಲಕ, ಎದುರಾಳಿ ನಿದ್ದೆ ಗೆಡಿಸಿಬಲ್ಲರು. ಇನ್ನು ಗೋಲಿ ಗುರ್ ಪ್ರೀತ್ ಸಿಂಗ್ ಸಂಧು ತಮ್ಮ ಚಾಣಾಕ್ಯ ನಡೆಯಿಂದ ಗೋಲು ತಡೆಯಬಲ್ಲ ಕ್ಷಮತೆ ಹೊಂದಿದ್ದಾರೆ. ಎಟಿಕೆ ತಂಡದಲ್ಲೂ ಸ್ಟಾರ್ ಆಟಗಾರರು ಇದ್ದು ತಂಡಕ್ಕೆ ನೆರವಾಗಬಲ್ಲರು. ಈ ಪಂದ್ಯವನ್ನು ಗೆದ್ದು ಎಟಿಕೆ ಪ್ರಶಸ್ತಿ ಸುತ್ತು ಪ್ರವೇಶಿಸುವ ಕನಸು ಕಾಣುತ್ತಿದೆ. ಭಾನುವಾರ ಕೋಲ್ಕತ್ತಾದಲ್ಲಿ ನಡೆಯುವ ಪಂದ್ಯದಲ್ಲಿ ವಿಜಯ ಲಕ್ಷ್ಮೀ ಯಾರ ಪರ ವಾಲುತ್ತಾಳೆ ಎಂಬುದು ಕುತೂಹಲ ಮೂಡಿಸಿದೆ.