ರಣಜಿ ಫೈನಲ್: ಬಂಗಾಳ ತಿರುಗೇಟುರಾಜ್ ಕೋಟ್

ರಾಜ್ ಕೋಟ್, ಮಾ12:  ಸುದೀಪ್ ಚಟರ್ಜಿ ಮತ್ತು ನಾಯಕ ವೃದ್ಧಿಮಾನ್ ಸಹಾ ಅವರ ಹೊಣೆಗಾರಿಕೆಯುತ ಅರ್ಧಶತಕಗಳ ನೆರವಿನಿಂದ ಬಂಗಾಳ ತಂಡ ಇಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಸೌರಾಷ್ಟ್ರ ತಂಡಕ್ಕೆ ದಿಟ್ಟ ಪ್ರತಿರೋಧ  ಒಡ್ಡಿದೆ.ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ನಾಲ್ಕನೇ ದಿನವಾದ ಗುರುವಾರ 3 ವಿಕೆಟ್ ಗೆ 134 ರನ್ ಗಳಿಂದ ದಿನದಾಟ ಆರಂಭಿಸಿದ ಬಂಗಾಳ ತಂಡ, ಭೋಜನ ವಿರಾಮದ ವೇಳೆಗೆ 94 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 218 ರನ್ ರನ್ ಗಳಿಸಿದೆ. ಮೊದಲ ಇನಿಂಗ್ಸ್ ಹಿನ್ನಡೆ ತಪ್ಪಿಸಿಕೊಳ್ಳಲು ಬಂಗಾಳ ಉಳಿದ ಏಳು ವಿಕೆಟ್ ಗಳಲ್ಲಿ ಇನ್ನೂ 207 ರನ್ ಗಳಿಸಬೇಕಿದೆ.ಸಹಾ ಜತೆ ಕ್ರೀಸ್  ಕಾಯ್ದುಕೊಂಡಿದ್ದ ಚಟರ್ಜಿ(47) ದಿನದ ಆರಂಭದಲ್ಲಿ ಅರ್ಧ ಶತಕ ಗಳಿಸಿ ಸಂಭ್ರಮಿಸಿದರು. ನಂತರ ಚಟರ್ಜಿ  ತಾಳ್ಮೆಯ ಆಟಕ್ಕೆ ಮೊರೆ ಹೋದರೆ ಸಹಾ ಬಿರುಸಿನ ಬ್ಯಾಟಿಂಗ್ ನಡೆಸಿ ತಂಡದ ಹಿನ್ನಡೆಯನ್ನು ತಗ್ಗಿಸುವ ಹಾದಿಯಲ್ಲಿ ವಿರಾಮಕ್ಕೂ ಮುನ್ನ ಅರ್ಧಶತಕ ಪೂರೈಸಿದರು. ಅಪಾಯಕಾರಿ ಎನಿಸಿರುವ ಚಟರ್ಜಿ ಮತ್ತು ಸಹಾ ಜೋಡಿಯನ್ನು ಬೇರೆಯಾಗಿಸಲು ಸೌರಾಷ್ಟ್ರ ಬೌಲರ್ ಗಳು   ಇನ್ನಿಲ್ಲದ ಹರಸಾಹಸ ನಡೆಸಿದರೂ ಯಾವುದೇ ಪ್ರಯೋಜನ ಆಗಲಿಲ್ಲ.ಸದ್ಯ ಚಟರ್ಜಿ ಅಜೇಯ 77 ರನ್ ಗಳಿಸಿದ್ದರೆ, ಸಹಾ ಅಜೇಯ 55 ರನ್ ಗಳಿಸಿದ್ದಾರೆ.