ಮತದಾನ ಜಾಗೃತಿಗೆ ಬಿ.ಎಡ್ ಕಾಲೇಜ್ ವಿದ್ಯಾಥರ್ಿಗಳ ಜಾಥಾ ನೈತಿಕ ಮತದಾನ; ಭ್ರಷ್ಟಾಚಾರಕ್ಕೆ ಕಡಿವಾಣ : ಡಾ.ರಾಜೇಂದ್ರ

ಬೆಳಗಾವಿ, 12:  ಭ್ರಷ್ಟಾಚಾರ ನಿಮರ್ೂಲನೆಗೆ ನೈತಿಕ ಮತದಾನವೇ ಪ್ರಮುಖ ಅಸ್ತ್ರವಾಗಿದೆ ಎಂದು ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ. ಅಭಿಪ್ರಾಯಪಟ್ಟರು.

ಜಿಲ್ಲಾ ಸ್ವೀಪ್ ಸಮಿತಿ ಹಾಗೂ ನಗರದ ವಿವಿಧ ಬಿ.ಎಡ್.ಕಾಲೇಜುಗಳ ವತಿಯಿಂದ ಮಂಗಳವಾರ (ಮಾ.12) ಹಮ್ಮಿಕೊಳ್ಳಲಾಗಿದ್ದ ಮತದಾರರ ಜಾಗೃತಿ ಜಾಥಾಗೆ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.

ದೇಶದಲ್ಲಿನ ಭ್ರಷ್ಟಾಚಾರಕ್ಕೆ ಮೂಲ ಕಾರಣವೇ ಚುನಾವಣಾ ಸಂದರ್ಭದಲ್ಲಿ ನಡೆಯುವ ಭ್ರಷ್ಟಾಚಾರ ಕಾರಣವಾಗಿದೆ. ಆದ್ದರಿಂದ ಪ್ರತಿಯೊಬ್ಬರು ನೈತಿಕ ಮತದಾನಕ್ಕೆ ಮುಂದಾಗಬೇಕು.

ಇಂದಿನ ಯುವ ಸಮುದಾಯವೇ ನವಭಾರತದ ಶಿಲ್ಪಿಗಳು. ಆದ್ದರಿಂದ ಮುಂಬರು ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು. ತಮ್ಮ ನೆರೆಹೊರೆ ಹಾಗೂ ಸ್ನೇಹಿತರಿಗೂ ಮತದಾನದಲ್ಲಿ ಭಾಗಬಹಿಸಲು ಪ್ರೇರೇಪಣೆ ನೀಡಬೇಕು ಎಂದು ಕರೆ ನೀಡಿದರು.

  ಹಣದ ಆಸೆಗೆ ತಮ್ಮ ಅಮೂಲ್ಯವಾದ ಮತಗಳನ್ನು ಮಾರಾಟ ಮಾಡದೇ ದೇಶದ ಭವಿಷ್ಯಕ್ಕಾಗಿ ಮತದಾನ ಮಾಡಬೇಕು ಎಂದರು.

ಹೆಸರು ಖಚಿತಪಡಿಸಿಕೊಳ್ಳಿ: ಮತದಾನ ಮಾಡಬೇಕಾದರೆ ಮತದಾರರ ಪಟ್ಟಿಯಲ್ಲಿ ಹೆಸರು ಕಡ್ಡಾಯವಾಗಿರಬೇಕು. ಆದ್ದರಿಂದ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಖಚಿತಪಡಿಸಿಕೊಳ್ಳಬೇಕು. ಒಂದು ವೇಳೆ ನೋಂದಣಿ ಮಾಡಿಸಿರದಿದ್ದರೆ ಈಗಲೂ ಹೆಸರು ನೋಂದಣಿಗೆ ಅವಕಾಶವಿದೆ ಎಂದು ಡಾ.ರಾಜೇಂದ್ರ ಹೇಳಿದರು.

ಜಿಲ್ಲಾ ಪಂಚಾಯತ ಮುಖ್ಯ ಲೆಕ್ಕಾಧಿಕಾರಿ ಪರಶುರಾಮ ದುಡಗುಂಟಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿದರ್ೇಶಕ ಎ.ಬಿ.ಪುಂಡಲೀಕ, ಯುವ ಸಬಲೀರಣ ಮತ್ತು ಕ್ರೀಡಾ ಇಲಾಖೆಯ ಉಪನೀದರ್ೇಶಕ ಸೀಬಿರಂಗಯ್ಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಪ್ಪಾಸಾಹೇಬ್ ನರಟ್ಟಿ, ಜಿಲ್ಲಾ ಸ್ವೀಪ್ ಸಮಿತಿಯ ಸಹಾಯಕ ಅಧಿಕಾರಿ ರವಿ ಭಜಂತ್ರಿ, ಬಿ.ಎಡ್. ಕಾಲೇಜುಗಳ ಅಧ್ಯಾಪಕರು ಉಪಸ್ಥಿತರಿದ್ದರು.

ನಗರದ ಆಯ್ದ ಬಿ.ಎಡ್. ಕಾಲೇಜುಗಳ ನೂರಾರು ವಿದ್ಯಾಥರ್ಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು. ಚನ್ನಮ್ಮ ವೃತ್ತದಿಂದ ಆರಂಭಗೊಂಡ ಜಾಥಾ ವನಿತಾ ವಿದ್ಯಾಲಯ, ಖಡೇ ಬಜಾರ್, ಕಾಕತಿ ವೇಸ್ ಮೂಲಕ ಸಂಚರಿಸಿ ಸದರ್ಾರ್ ಮೈದಾನದಲ್ಲಿ ಮುಕ್ತಾಯಗೊಂಡಿತು.