ಬೆಂಗಳೂರು, ಜೂ.7, ಹಂಗಾಮಿ ರಾಷ್ಟ್ರಪತಿ, ಉಪರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದ ಬಿ ಡಿ ಜತ್ತಿ ಅವರ ಪುಣ್ಯಸ್ಮರಣೆ ಇಂದು. ಈ ಸಂದರ್ಭದಲ್ಲಿ, ಅವರ ಸಾರ್ವಜನಿಕ ಜೀವನದ ವಿವಿಧ ಸೇವೆಗಳನ್ನು ಸ್ಮರಿಸೋಣ, ನಮಿಸೋಣ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗೌರವ ಸಲ್ಲಿಸಿದ್ದಾರೆ.ಹಂಗಾಮಿ ರಾಷ್ಟ್ರಪತಿ ಹುದ್ದೆ ಸೇರಿದಂತೆ ದೇಶದ ಎಲ್ಲಾ ಅತ್ಯುನ್ನತ ಸಾಂವಿಧಾನಿಕ ಹುದ್ದೆಗಳನ್ನು ನಿಭಾಯಿಸಿದ ಹೆಮ್ಮೆಯ ಕನ್ನಡಿಗ, ಬಸವ ಸಮಿತಿ ಸ್ಥಾಪಕರೂ ಆದ ಬಸಪ್ಪ ದಾನಪ್ಪ ಜತ್ತಿ ಅವರ ಪುಣ್ಯಸ್ಮರಣೆಯಂದು ನಮನಗಳನ್ನು ಸಲ್ಲಿಸೋಣ ಎಂದು ಮುಖ್ಯಮಂತ್ರಿ ಟ್ವೀಟ್ ಮಾಡಿದ್ದಾರೆ.