ಕೊರೋನಾ ಶಂಕಿತರನ್ನು ಇರಿಸಲು 17 ಸ್ಟಾರ್ ಹೋಟೆಲ್ ಗುರುತಿಸಿದ ಬಿಬಿಎಂಪಿ

ಬೆಂಗಳೂರು, ಮಾ 29, ನಗರದಲ್ಲಿ ಕೊರೋನಾ ಸೋಂಕಿನ ಶಂಕಿತರನ್ನು ಪ್ರತ್ಯೇಕವಾಗಿರಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 3 ಸ್ಟಾರ್ ಮಟ್ಟದ 17 ಹೋಟೆಲ್ ಗಳನ್ನು ಗುರುತಿಸಿದೆ. ಕೋವಿಡ್ -19 ಶಂಕಿತರನ್ನು ಪರೀಕ್ಷೆಗೊಳಪಡಿಸಿ, ಅದರ ವರದಿ ಬರುವರೆಗೆ ಅಂದರೆ ಗರಿಷ್ಠ ಎರಡು ದಿನಗಳ ಕಾಲ ಈ ಹೋಟೆಲ್ ಗಳಲ್ಲಿ ಪ್ರತ್ಯೇಕವಾಗಿರಿಸಲಾಗುವುದು. ಈ ಹೋಟೆಲ್ ಗಳಲ್ಲಿರುವ ಹವಾನಿಯಂತ್ರಿತ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸುವಂತೆ ಸೂಚನೆ ನೀಡಲಾಗಿದೆ.ಈ ಶಂಕಿತ ವ್ಯಕ್ತಿಗಳ ಸಂಖ್ಯೆಗಳಿಗನುಗುಣವಾಗಿ ಕರ್ನಾಟಕ ವಿಪತ್ತು ನಿರ್ವಹಣಾ ಪ್ರಾಧಿಕಾರ ನಿಗದಿಪಡಿಸಿ ದರವನ್ನು ಪಾವತಿಸಲಾಗುವುದು ಎಂದು ಬಿಬಿಎಂಪಿ ತಿಳಿಸಿದೆ. 17 ಹೋಟೆಲ್ ಗಳು: ನಗರದ ಸುಧಾಮನಗರದ ಸಬರ್ ಮತಿ ರೆಸಿಡೆನ್ಸಿ, ಬಿಟಿಎಂ ಲೇಔಟ್ ನ ಎಮಿರೇಟ್ಸ್ ಹೋಟೆಲ್, ಕೋರಮಂಗಲದ ಎಂಪೈರ್ ಹೋಟೆಲ್, ಕೋರಮಂಗಲದ ಸಿಲಿಕ್ರೆಸ್ಟ್, ಜಯನಗರದ ಓಯೋ ಅಮೆಥೈಸ್ಟ್ , ಗಾಂಧಿನಗರದ ರಾಮಕೃಷ್ಣ ಲಾಡ್ಜ್, ಆನಂದ ರಾವ್ ವೃತ್ತದ ಸಿಟಡೆಲ್, ಗಾಂಧಿನಗರದ ಲಿಖಿತ್ ಇಂಟರ್ ನ್ಯಾಷನಲ್, ಸಂಪಂಗಿ ರಾಮನಗರದ ಫಾರ್ಚ್ಯೂನ್ ಪಾರ್ಕ್ ಜೆಪಿ ಸೆಲೆಸ್ಟಿಯಲ್, ಗಾಂಧಿನಗರದ ಅರಫನ್ ಇನ್, ಹಲಸೂರಿನ ಲೆಮನ್ ಟ್ರೀ ಪ್ರೀಮಿಯರ್, ಸಿಂಗಸಂದ್ರದ ಕೀಸ್ ಸೆಲೆಕ್ಟ್, ಚಾಲುಕ್ಯ ವೃತ್ತದ ಚಾಲುಕ್ಯ ಹೋಟೆಲ್, ಹಲಸೂರು ಕೆರೆ ಬಳಿಯ ಓಯೋ ಟೌನ್, ದೊಮ್ಮಲೂರಿನ ಶ್ರೀ ಲಕ್ಷ್ಮಿ ಪಿಜಿ, ವೈಟ್ ಫೀಲ್ಡ್ ನ ಕೀಸ್ ಸೆಲೆಕ್ಟ್, ಹಲಸೂರಿನ ಟ್ರಿನಿಟಿ ವುಡ್ ಹೋಟೆಲ್.