ಢಾಕಾ, ಮಾ.7, ಭರವಸೆಯ ಬ್ಯಾಟ್ಸ್ ಮನ್ ಲಿಟನ್ ದಾಸ್ (176) ಮತ್ತು ತಮೀಮ್ ಇಕ್ಬಾಲ್ (ಅಜೇಯ 128) ದಾಖಲೆಯ ಜೊತೆಯಾಟದ ನೆರವಿನಿಂದ ಬಾಂಗ್ಲಾದೇಶ ಮೂರನೇ ಏಕದಿನ ಪಂದ್ಯದಲ್ಲಿ ಜಿಂಬಾಬ್ವೆ ತಂಡವನ್ನು ಮಣಿಸಿ, ಕ್ಲೀನ್ ಸ್ವೀಪ್ ಸಾಧನೆ ಮಾಡಿತು. ಮಳೆಯಿಂದಾಗಿ ಪಂದ್ಯವನ್ನು 43–43 ಓವರ್ಗಳಿಗೆ ಇಳಿಸಲು ನಿರ್ಧರಿಸಲಾಯಿತು. ಟಾಸ್ ಸೋತ ನಂತರ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾ ತಂಡದ ಆರಂಭಿಕರು ತಂಡಕ್ಕೆ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿದರು. ಲಿಟನ್ ದಾಸ್ ಹಾಗೂ ತಮೀಮ್ ಜೋಡಿ ಎದುರಾಳಿ ಬೌಲರ್ ಗಳನ್ನು ಕಾಡಿತು. ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಜಿಂಬಾಬ್ವೆ ತಂಡ ಮಾಡಿಕೊಂಡ ಪ್ಲಾನ್ ಉಲ್ಟಾ ಆಯಿತು. ಪರಿಣಾಮ ಮೊದಲ ವಿಕೆಟ್ ಗೆ ಈ ಜೋಡಿ 292 ರನ್ ಗಳ ಜೊತೆಯಾಟದ ಕಾಣಿಕೆ ನೀಡಿ ತಂಡಕ್ಕೆ ಆಧಾರವಾಯಿತು. ಪರಿಣಾಮ ಬಾಂಗ್ಲಾ 43 ಓವರ್ಗಳಲ್ಲಿ 3 ವಿಕೆಟ್ ಗೆ 322 ರನ್ ಸೇರಿಸಿತು. ಗುರಿಯನ್ನು ಬೆನ್ನಟ್ಟಿದ ಜಿಂಬಾಬ್ವೆ ತಂಡ 37.3 ಓವರ್ಗಳಲ್ಲಿ 218 ರನ್ಗಳಿಗೆ ಕುಸಿದಿದೆ. ಜಿಂಬಾಬ್ವೆ ಪರ ಅಲೆಕ್ಸಾಂಡರ್ ರಾಜ 61 ರನ್ ಗಳಿಸಿದರು. ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ ಲಿಟ್ಟನ್ ಅವರಿಗೆ ಪ್ಲೇಯರ್ ಆಫ್ ದಿ ಮ್ಯಾಚ ಪ್ರಶಸ್ತಿ ಪಡೆದರು. ಕಾರ್ಲ್ ಮುಂಬಾ ಜಿಂಬಾಬ್ವೆ ಪರ 69 ರನ್ಗಳಿಗೆ ಎಲ್ಲಾ ಮೂರು ವಿಕೆಟ್ಗಳನ್ನು ಪಡೆದರು. ಜಿಂಬಾಬ್ವೆಯ ಇನ್ನಿಂಗ್ಸ್ನಲ್ಲಿ ವೆಸ್ಲಿ ಮಾಧೆವೆರೆ 42 ಮತ್ತು ರೆಗಿಸ್ ಚಕಾಬ್ವಾ 34 ರನ್ ಗಳಿಸಿದರು. ಬಾಂಗ್ಲಾದೇಶ ಪರ ಸೈಫುದ್ದೀನ್ 41 ರನ್ಗಳಿಗೆ ನಾಲ್ಕು ವಿಕೆಟ್
ಪಡೆದರು.