ನವದೆಹಲಿ, ಫೆ 18, ಅಮೆರಿಕನ್ ಏರ್ಲೈನ್ಸ್ ಸಂಸ್ಥೆಯು ಇದೇ ಅಕ್ಟೋಬರ್ ನಿಂದ ಬೆಂಗಳೂರು-ಸೀಟೆಲ್ ನಗರಗಳ ನಡುವೆ ನೇರ ವಿಮಾನ ಸಂಚಾರ ಸೇವೆ ಆರಂಭಿಸುವುದಾಗಿ ಪ್ರಕಟಿಸಿದೆ.ಸೀಟೆಲ್-ಬೆಂಗಳೂರು ನಡುವಿನ ಮೊದಲ ಮೊದಲ ವಿಮಾನಯಾನದ ಮುಂಗಡ ಟಿಕೆಟ್ ಬುಕ್ಕಿಂಗ್ ಸೇವೆಯನ್ನು ಈತಿಂಗಳಾಂತ್ಯಕ್ಕೆ ಪ್ರಾರಂಭ ಮಾಡಲಾಗುವುದಾಗಿ ಕಂಪೆನಿ ಹೇಳಿದೆ.ಈ ಸೇವೆಯ ಮೂಲಕ ಭಾರತದ ಪ್ರಯಾಣಿಕರು, ನಾಗರಿಕರು ಸೀಟೆಲ್ ನಗರ ತಲುಪಿ, ಅಲ್ಲಿಂದ ಅಮೆರಿಕದ ಬೇರೆ, ಬೇರೆ, 70 ನಗರಗಳಿಗೆ ಪ್ರಯಾಣ ಮಾಡುವ ಹೊಸ ಅನುಕೂಲ, ಅವಕಾಶ ದೊರಕಲಿದೆ ಎಂದೂ ಸಂಸ್ಥೆ ತಿಳಿಸಿದೆ.