ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಬಿ.ಎ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶಗಳಿವೆ: ಡಾ. ಅಜಿತ್ ಪ್ರಸಾದ

B.A. students have more opportunities in competitive exams: Dr. Ajit Prasad

ಧಾರವಾಡ 22: ಜೆ.ಎಸ್‌.ಎಸ್ ಶ್ರೀ ಮಂಜುನಾಥೇಶ್ವರ ಮಹಾವಿದ್ಯಾಲಯದಲ್ಲಿ ಬಿ.ಎ ವಿದ್ಯಾರ್ಥಿಗಳಿಗಾಗಿ ರಂಗೋಲಿ, ಚಿತ್ರಕಲೆ, ಭಾಷಣ, ಪ್ರಬಂಧ,  ರಸಪ್ರಶ್ನೆ ಹೀಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಈ ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿಗಳಾದ ಡಾ. ಅಜಿತ್ ಪ್ರಸಾದ ರವರು ಬಹುಮಾನ ವಿತರಿಸಿ ಮಾತನಾಡಿ ಇಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಬಿ.ಎ ವಿದ್ಯಾರ್ಥಿಗಳಿಗೆ ಸಾಕಷ್ಟು ಅವಕಾಶಗಳಿವೆ ಎಂದು ಹೇಳಿದರು. ನಮ್ಮ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ 2019ರಲ್ಲಿ ಸ್ಪರ್ಧಾತ್ಮಕ ಗ್ರಂಥಾಲಯವನ್ನು ಸ್ಥಾಪಿಸಿದ್ದಾರೆ. ಇಲ್ಲಿ ಭಾರತ ದೇಶದ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಹಳೆಯ ಪ್ರಶ್ನೆ ಪತ್ರಿಕೆಗಳು ಹಾಗೂ ಗ್ರಂಥಾಲಯದಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಪುಸ್ತಕಗಳು ಲಭ್ಯವಿದ್ದು, 50-60 ನಿಯತಕಾಲಿಕೆಗಳು ನಮ್ಮಲ್ಲಿವೆ ಎನ್‌.ಡಿ.ಎ, ಕೆ.ಎ.ಎಸ್, ಐ.ಎ.ಎಸ್, ಪಿ.ಎಸ್‌.ಐ, ಎಸ್‌.ಸಿ.ಎ ಹೀಗೆ ಮುಂತಾದ 150ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಹತೆಯನ್ನು ಪಡೆಯಲು ಅವಕಾಶಗಳಿವೆ ಎಂದರು. 

ಈ ಕಾರ್ಯಕ್ರಮವನ್ನು ಉಪನ್ಯಾಸಕರಾದ ಡಾ. ಆರ್ ವಿ ಚಿಟಗುಪ್ಪಿ ಆಯೋಜಿಸಿದ್ದರು. ವಿದ್ಯಾರ್ಥಿನಿಯಾದ ರುಮಾನಾ ಸ್ವಾಗತಿಸಿದರು. ಇಂಗ್ಲೀಷ್ ಉಪನ್ಯಾಸಕಿಯರಾದ ಕು.ವಾಣಿಶ್ರೀ ಕುಲಕರ್ಣಿ ಶೈಕ್ಷಣಿಕ ವರ್ಷದ ವರದಿಯನ್ನು ಓದಿದರು. ಚೇತನಾ ಕೊರಿಶೆಟ್ಟರ ರವರು ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳ ಬಹುಮಾನಗಳ ವಿತರಣೆಯನ್ನು ನಡೆಸಿಕೊಟ್ಟರು. ವಿದ್ಯಾರ್ಥಿಗಳಾದ ಕು. ಮಂಜುನಾಥ ವಂದಿಸಿದರು ಕು.ಸ್ಪೂರ್ತಿ ಹಾಗೂ ಕು. ಪ್ರೀತಿರವರು ನಿರೂಪಿಸಿದರು. ಹಾಗೂ ಐಟಿಐ ಕಾಲೇಜಿನ ಪ್ರಚಾರದ ಮಹಾವೀರ ಉಪಾಧ್ಯಾಯ ಅವರು ಉಪಸಿದ್ಧರಿದ್ದರು. ಮಾಂತೇಶ್ ರಾವಟೆ,  ದೀಪಾ ಸಂಕಪಾಳೆ ಹಾಗೂ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.