ಭಕ್ತರಿಂದ ಅಯ್ಯಪ್ಪ ಸ್ವಾಮೀಯ ಕುಂಭಮೇಳ

ಶಿರಸಂಗಿ 27: ಸಮೀಪದ ಕಲ್ಲಾಪುರ ಗ್ರಾಮದಲ್ಲಿ ಶುಕ್ರವಾರ ಅಯ್ಯಪ್ಪ ಸ್ವಾಮೀಯ ಮಹಾಪೂಜೆ ಅಂಗವಾಗಿ ಸ್ಥಳೀಯ ಮಾಲಾಧಾರಿ ಭಕ್ತರಿಂದ ಅಯ್ಯಪ್ಪ ಸ್ವಾಮೀಯ ಭಾವಚಿತ್ರ ಕುಂಭಮೇಳದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಜರುಗಿತು. ಈ ಸಂದರ್ಭದಲ್ಲಿ ಗುರುಸ್ವಾಮಿಗಳಾದ ಕಲ್ಲಪ್ಪ ಪತ್ತಾರ, ಬಸವರಾಜ ಕುಂಬಾರ, ಮಹಾಂತೇಶ ಡೊಕ್ಕಿ, ನಾಗಪ್ಪ ಪತ್ತಾರ, ಕಲ್ಲಪ್ಪ ಡೊಕ್ಕಿ, ಸಂದೀಪ ಬಡಿಗೇರ, ಲಕ್ಷ್ಮನ ಜೋಕಾಲಿ, ದ್ಯಾಮಣ್ಣಾ ಉಡಚನ್ನವರ, ಕಲ್ಲಪ್ಪ ಹೂಲಿಕಟ್ಟಿ, ಶಂಕ್ರೆಪ್ಪಾ ಗೋಡಿ ಸೇರಿದಂತೆ ಮತ್ತಿತರು ಇದ್ದರು.