ಆಯುಷ್ಮಾನ್ ಭಾರತ ಯೋಜನೆಯು ಬಡವರ ಆಶಾಕಿರಣವಾಗಿದೆ: ತಿಪ್ಪಣ್ಣ

ಲೋಕದರ್ಶನ ವರದಿ

ಶಿರಹಟ್ಟಿ: ಪ್ರಸ್ತುತ ದಿನಮಾನಗಳಲ್ಲಿ ಹಲವಾರು ರೋಗ ರುಜಿನಗಳು ಬರುತ್ತಿದ್ದು, ಆಯುಷ್ಮಾನ್ ಭಾರತ ಯೋಜನೆಯಡಿ ಸಕರ್ಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಆರೋಗ್ಯ ಚಿಕಿತ್ಸೆ ಪಡೆಯಬಹುದಾಗಿದ್ದು ಈ ಯೋಜನೆಯು ಬಡವರ ಆಶಾಕಿರಣವಾಗಿದೆ ಎಂದು ಸ್ಥಾಯಿ ಸಮೀತಿ ಅಧ್ಯಕ್ಷ ತಿಪ್ಪಣ್ಣ ಕೊಂಚಿಗೇರಿ ಕರೆ ನೀಡಿದರು.

ಅವರು ತಾಲೂಕಾ ಪಂಚಾಯಿತಿ ಸಾಮಥ್ರ್ಯ ಸೌಧದಲ್ಲಿ ಆರೋಗ್ಯ ಇಲಾಖೆಯು ಹಮ್ಮಿಕೊಂಡ ಆಯುಷ್ಮಾನ್ ಭಾರತ್ ಯೋಜನೆಯ ಅನುಷ್ಠಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಂತರ ವೈದ್ಯಾಧಿಕಾರಿ ಚಂದ್ರು ಲಮಾಣಿ ಆಯುಷ್ಮಾನ ಭಾರತ ಯೋಜನೆಯ ಬಗ್ಗೆ ಮಾತನಾಡುತ್ತಾ, ತಾಲೂಕಾಸ್ಪತ್ರೆಯಲ್ಲಿ ಈ ಯೋಜನೆಯನ್ನು ಜನರಲ್ಲಿ ಅರಿವು ಮೂಡಿಸುವಿದಲ್ಲದೇ, ಕುಟುಂಬದ ಪ್ರತೀ ಸದಸ್ಯರು ಈ ಕಾರ್ಡನ್ನು ಹೊಂದಬೇಕು ಹಾಗೂ ಈ ಕಾಡರ್ಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಕೇವಲ 10/- ರೂ ಕೊಟ್ಟು ಪಡೆಯಬಹುದಾಗಿದ್ದು ಈ ಕಾರ್ಡು  ಅ4 ಅಳತೆಯಲ್ಲಿ ನೀಡಲಾಗುತ್ತಿದ್ದು ಹಾಗೂ ನೋಂದಣಿ ಮಾಡಿಸಿಕೊಳ್ಳಲು ಅವರ ವೈಯಕ್ತಿಕ ಮಾಹಿತಿಗಳಾದ ಆಧಾರ ಕಾರ್ಡ ಹಾಗೂ ರೇಷನ್ ಕಾರ್ಡ ತಪ್ಪದೇ ತರಬೇಕು ಹಾಗೂ ಆಧಾರ ಕಾರ್ಡ ಮತ್ತು ರೇಷನ್ ಕಾರ್ಡ ಮೋಬೈಲ್ ಸಂಖ್ಯೆಯ ಲಿಂಕ್ ಹೊಂದಿರಬೇಕು. 

ಈವರೆಗೆ ಒಟ್ಟು 1650 ರೋಗಗಳನ್ನು ಪತ್ತೇ ಮಾಡಲಾಗಿದ್ದು ಈ ಪೈಕಿ ಸಕರ್ಾರಿ ಆಸ್ಪತ್ರೆಯಲ್ಲಿ ಕೇವಲ 291 ಕಾಯಿಲೆಗಳಿಗೆ ಮಾತ್ರ ಚಿಕಿತ್ಸೆ ನೀಡುತ್ತಿದ್ದು, ಉಳಿದ ರೋಗಗಳಿಗೆ ಆಯುಷ್ಮಾನ್ ಭಾರತ ಪರಿವಾನಿಗೆ ಪಡೆದ ಖಾಸಗಿ ಆಸ್ಪತ್ರೆಗಳಲ್ಲಿ ಪಡೆಯಬಹುದಾಗಿದ್ದು, ಈ ಆಯುಷ್ಮಾನ್ ಭಾರತದ ಪ್ರಯೋಜನೆ ಪಡೆಯಬೇಕಾದರೆ ಖಾಸಗಿ ಆಸ್ಪತ್ರೆಯಿಂದ ಒಂದು ರೆಫರಲ್ ಕಾರ್ಡನ್ನು ಪಡೆದು ಸಕರ್ಾರಿ ಆಸ್ಪತ್ರೆಯ ಅಧಿಕಾರಿಗಳಿಗೆ ಸಲ್ಲಿಸಿದಾಗ, ಸಕರ್ಾರಿ ಆಸ್ಪತ್ರೆಯಿಂದ ಈ ಯೋಜನೆ ಪಡೆದುಕೊಳ್ಳಲು ಅನುಮತಿ ನೀಡಲಾಗುತ್ತದೆ. ಇಲ್ಲಿಯ ವರೆಗೆ ಈ ಯೋಜನೆ ಹೊಂದಿದ ರೋಗಿಗಳು ದಿನಕ್ಕೆ ಸರಾಸರಿಯಾಗಿ 10 ರಿಂದ 15 ಜನ ಆಸ್ಪತ್ರೆಗೆ ಬರುತ್ತಿದ್ದು, ಆಸ್ಪತ್ರೆಗೆ ಬರುವ ಪ್ರತೀ ರೋಗಿಯ ಕುಟುಂಬ ಹಾಗೂ ಸದಸ್ಯರಿಗೆ ಈ ಯೋಜನೆಯನ್ನು ಹೊಂದಲು ತಿಳುವಳಿಕೆ ನೀಡಲಾಗುತ್ತಿದೆ ಹಾಗೂ ಈ ಯೋಜನೆ ಸಂಪೂರ್ಣ ಯಶಸ್ವಿಗೊಳ್ಳುವಲ್ಲಿ ಆಶಾ ಕಾರ್ಯಕರ್ತರ ಸೇವೆ ಮುಖ್ಯವಾಗಿದೆ ಎಂದರು.   

ಈ ಕಾರ್ಯಕ್ರಮದಲ್ಲಿ ತಾಲೂಕಾ ಪಂಚಾಯಿತಿ ಅಧ್ಯಕ್ಷೆ ಸುಸೀಲಾಬಾಯಿ ಲಮಾಣಿ, ತಾಪಂ ಸದಸ್ಯೆ ಹುಸೇನಬಿ ಅತ್ತೀಗೇರಿ, ಈಓ ನಿಂಗಪ್ಪ ಓಲೇಕಾರ, ತಾಲೂಕಾ ಆರೊಗ್ಯಾಧಿಕಾರಿ ಡಾ. ಸುಭಾಸ ದೈಗೊಂಡ, ಡಾ. ಶ್ರೀಕಾಂತ ಕಾಟೇವಾಲಾ, ಡಾ. ವಿ.ಎಫ್ ಪಾಟೀಲ, ಡಾ. ಬಸವರಾಜ ಹಳ್ಳೆಮ್ಮನವರ, ಡಾ. ಆಸ್ಮಾ ಹೆಸರೂರ, ಡಾ. ನಿರ್ಮಲಾ ಕನ್ಯಾಳ, ಡಾ. ರಸ್ಮಿ ಪಾಟೀಲ, ತಾಲೂಕಾ ಆರೋಗ್ಯ ಮೇಲ್ವಿಚಾರಕ ಬಿ ಎಸ್ ಹಿರೇಮಠ, ಆರೋಗ್ಯ ಮಿತ್ರರಾದ ಜಗದೀಶ ಕಾಳೆ, ಅನ್ನಪೂರ್ಣ ಹಾಗೂ ಇನ್ನೂ ಅನೇಕ ಆರೋಗ್ಯಾಧಿಕಾರಿಗಳು ಮತ್ತು ನೂರಾರು ಆಶಾ ಕಾರ್ಯಕತರ್ೆಯರು ಪಾಲ್ಗೊಂಡಿದ್ದರು.