ಅಯೋಧ್ಯೆ ತೀಪು: ಮರಾಠವಾಡ ಪ್ರದೇಶದಲ್ಲಿ ಬಿಗಿಭದ್ರತೆ

 ಔರಂಗಬಾದ್ ನ 9 :      ಅಯೋಧ್ಯೆ ಪ್ರಕರಣದಲ್ಲಿ  ಸುಪ್ರೀಂ ಕೋರ್ಟ್ ತೀಪು  ಪ್ರಕಟವಾಗಲಿರುವ ಹಿನ್ನಲೆಯಲ್ಲಿ   ಮರಾಠವಾಡ ಪ್ರದೇಶದ ಎಂಟು ಜಿಲ್ಲೆಗಳಲ್ಲಿ ಭದ್ರತೆ  ಹೆಚ್ಚಿಸಲಾಗಿದೆ.  ಔರಂಗಬಾದ್   ನಗರ ಪೊಲೀಸ್ ಆಯುಕ್ತರು ಮತ್ತು ಪ್ರದೇಶದ ಏಳು ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳು ಬಿಗಿಭದ್ರತೆ ಬಗ್ಗೆ  ಕ್ರಮ ಕೈಗೊಂಡಿದ್ದಾರೆ. ಔರಂಗಬಾದ್  ನಗರದ ಪೊಲೀಸ್  ಆಯುಕ್ತ ಚಿರಂಜೀವ್ ಪ್ರಸಾದ್ ಮಾತನಾಡಿ, ನಗರದಾದ್ಯಂತರ  3500 ಪೊಲೀಸ್ ಸಿಬ್ಬಂದಿ  300 ರಕ್ಕೂ ಹೆಚ್ಚು  ಉನ್ನತ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.  ಸ್ಥಳೀಯ ಪೊಲೀಸರಲ್ಲದೇ  ಸಿ  ಆರ್ ಪಿಎಫ್ ಎಸ್ಆರ್ ಪಿ  ತುಕಡಿಗಳುನ್ನೂ ಸಹ ನಗರದಾದ್ಯಂತ ಕಾನೂನು ಸುವ್ಯವಸ್ಥೆ  ಕಾಪಾಡಲು ನಿಯೋಜನೆ ಮಾಡಲಾಗಿದೆ.  ತೀರ್ಪಿನ ದೃಷ್ಟಿಯಿಂದ ಗ್ರಾಮೀಣ ಪ್ರದೇಶದಲ್ಲೂ  ಭದ್ರತೆ ಬಿಗಿಗೊಳಿಸಲಾಗಿದೆ ಎಂದು ಗ್ರಾಮೀಣ ಎಸ್ಪಿ ಮೋಕ್ಷದಾ ಪಾಟೀಲ್ ಹೇಳಿದ್ದಾರೆ.  ಪೊಲೀಸ್ ಅಧಿಕಾರಿಗಳು ಈಗಾಗಲೇ ಧಾರ್ಮಿಕರ ಮುಖಂಡರು , ರಾಜಕೀಯ ಮುಖಂಡರ ಜೊತೆ ಸಭೆ ಮಾಡಿ  ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಮನವಿ ಮಾಡಿದ್ದಾರೆ  ಸಾಮಾಜಿಕ  ಜಾಲತಾಣದಲ್ಲಿ  ಆಕ್ಷೇಪಾರ್ಹ ಮತ್ತು ಸುಳ್ಳು ಮಾಹಿತಿ ಹಬ್ಬಿಸುವವರ  ವಿರುದ್ಧ  ಪ್ರಕರಣ ದಾಖಲಿಸಲಾಗುವುದು ಎಂದೂ  ಎಚ್ಚರಿಕೆ ಣಿ ನೀಡಲಾಗಿದೆ.