ನವದೆಹಲಿ, ಅ 14: ಅಯೋಧ್ಯಾ ಭೂ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಸೋಮವಾರದಿಂದ ವಿಚಾರಣೆಯನ್ನು ಪುನರಾರಂಭಭಿಸಲಿದೆ. ದಸರಾ ರಜೆಯ ಕಾರಣ ಒಂದು ವಾರಗಳ ಕಾಲ ನ್ಯಾಯಾಲಯಕ್ಕೆ ಬಿಡುವಿದ್ದು ಮುಖ್ಯನ್ಯಾಯಮೂರ್ತಿ ರಂಜನ್ ಗೋಗಾಯ್ ನೇತೃತ್ವದ ಸಂವಿಧಾನ ಪೀಠ ಕಳೆದ ಆಗಸ್ಟ್ 6 ರಿಂದಲೂ ಪ್ರಕರಣದ ವಿಚಾರಣೆಯನ್ನು ಆದ್ಯತೆಯ ಮೇಲೆ ನಡೆಸುತ್ತಿದೆ. ಅಕ್ಟೋಬರ್ 17 ರೊಳಗೆ ವಾದ-ಪ್ರತಿವಾದ ಮುಗಿಸಬೇಕೆಂಬ ಗಡುವು ವಿಧಿಸಿ ವಿಚಾರಣೆಯನ್ನು ನಿರಂತರವಾಗಿ ನಡೆಸುತ್ತಿದೆ. ನವೆಂಬರ್ 17 ರಂದು ಮುಖ್ಯ ನ್ಯಾಯಮೂರ್ತಿಯವರು ಅಧಿಕಾರದಿಂದ ನಿರ್ಗಮಿಸುತ್ತಿದ್ದು, ಅದೇ ದಿನ ಅಯೋಧ್ಯಾ ಭೂಮಿ ಒಡೆತನದ ಪ್ರಕರಣದ ತೀಪು ಪ್ರಕಟವಾಗುವ ಸಾಧ್ಯತೆಯಿದೆ.