ಅಯೋಧ್ಯೆ ತೀಪು : ಯುಪಿಯಲ್ಲಿ ಇಂದು ಮತ್ತು ಸೋಮವಾರ ಶಾಲಾ ಕಾಲೇಜುಗಳಿಗೆ ರಜೆ

ಲಕ್ನೋ, ನ 9  :      ಸುಪ್ರೀಂಕೋರ್ಟ್ ನಿಂದ ಅಯೋಧ್ಯೆ ತೀಪು ಪ್ರಕಟವಾಗಲಿರುವ ಹಿನ್ನೆಲೆಯಲ್ಲಿ ಉತ್ತರಪ್ರದೇಶದ ಎಲ್ಲಾ ಜಿಲ್ಲೆಗಳಲ್ಲಿ ಪ್ರತಿಬಂಧಕಾಜ್ಞೆ ವಿಧಿಸಲಾಗಿದೆ.    ಇದರ ಪ್ರಕಾರ ನಾಲ್ಕು ಅಥವಾ ಐದಕ್ಕಿಂತ ಹೆಚ್ಚು ಜನ ಗುಂಪಾಗಿ ಒಂದು ಕಡೆ ಸೇರುವಂತಿಲ್ಲ. ಇನ್ನು ಸೂಕ್ಷ್ಮ ಜಿಲ್ಲೆಗಳಲ್ಲಿ ಪೊಲೀಸ್ ಸಿಬ್ಬಂದಿ ಫ್ಲಾಗ್ ಮಾರ್ಚಿಂಗ್ ನಡೆಸುತ್ತಿದ್ದಾರೆ. ತೀರ್ಪುನ ಹಿನ್ನೆಲೆಯಲ್ಲಿ ಶನಿವಾರ ಮತ್ತು ಸೋಮವಾರ ಎಲ್ಲಾ ಶಾಲಾ ಕಾಲೇಜುಗಳಿಗೆ ಸರ್ಕಾರ ರಜೆ ಘೋಷಣೆ ಮಾಡಿದೆ.    ನೇಪಾಳದ ಗಡಿಯಲ್ಲೂ ಸಹ ಬಿಗಿ ಕಟ್ಟೆಚ್ಚರ ವಹಿಸಲಾಗಿದೆ. ಎಲ್ಲ ಜಿಲ್ಲೆಗಳಲ್ಲಿ ನಿಯಂತ್ರಣ ಕೊಠಡಿಗಳನ್ನು ಸ್ಥಾಪನೆ ಮಾಡಲಾಗಿದೆ.    ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ಶಾಂತಿ, ಸುವ್ಯವಸ್ಥೆ ಧಕ್ಕೆಗೆ ಕಾರಣರಾಗುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.    ಇನ್ನು ಅಯೋಧ್ಯೆಯಲ್ಲಿ ಪೊಲೀಸರ ಸರ್ಪಗಾವಲು ಹಾಕಲಾಗಿದ್ದು, ಎಲ್ಲ ಕಡೆ ಪೊಲೀಸರ ಬೂಟು ಮತ್ತು ಲಾಟಿ ಸಪ್ಪಳ ಕೇಳಿ ಬರುತ್ತಿದೆ.