ಕೋಝಿಕೋಡ್, ನ 12 : ಅಯೋಧ್ಯೆಯ ಬಾಬರಿ ಮಸೀದಿ- ರಾಮಜನ್ಮಭೂಮಿ ವಿವಾದ ಇತ್ಯರ್ಥಕ್ಕೆ ಸಂಬಂಧಪಟ್ಟಂತೆ ಸುಪ್ರೀಂಕೋಟರ್್ ನ ಸಂವಿಧಾನಪೀಠ ನೀಡಿರುವ ಸರ್ವ ಸಮ್ಮತ ತೀಪು ನಿರಾಶೆ ಉಂಟುಮಾಡಿದೆ ಎಂದು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಅಸಮಾಧಾನ ಹೊರಹಾಕಿದೆ. ಕೇರಳದ ಮಲ್ಲಪುರಂ ಜಿಲ್ಲೆಯಲ್ಲಿ ನಡೆದ ಪಕ್ಷದ ಸಭೆಯಲ್ಲಿ ಸುಪ್ರೀಂಕೋರ್ಟ್ ತೀರ್ಪುನ ವಿರುದ್ಧ ಅಸಮಾಧಾನ ಹೊರಹಾಕಲಾಗಿದೆ. ಈ ತೀರ್ಪುನ ವಿರುದ್ಧ ಮುಂದೆ ಯಾವ ರೀತಿಯ ಹೋರಾಟ ಮಾಡಬೇಕು ಎಂಬುದರ ಬಗ್ಗೆ ಜಾತ್ಯತೀತ ಸಂಘಟನೆಗಳು ಮತ್ತು ಇತರೆ ಮುಸ್ಲಿಂ ಸಂಘಟನೆಗಳ ನಾಯಕರೊಂದಿಗೆ ಸಮಾಲೋಚನೆ ಮಾಡಿ ಮುಂದಿನ ಹೋರಾಟದ ರೂಪುರೇಷೆಗಳನ್ನು ನಿರ್ಧಾರ ಮಾಡಲಾಗುವುದು ಎಂದು ಮುಖಂಡರೊಬ್ಬರು ಹೇಳಿಕೊಂಡಿದ್ದಾರೆ. ಸುಪ್ರೀಂಕೋರ್ಟ್ ನೀಡಿರುವ ತೀರ್ಮಾನವನ್ನು ಮುಸ್ಲಿಂ ಲೀಗ್ ವಿವರವಾಗಿ ಪರಿಶೀಲನೆ ಮಾಡಲಿದೆ.