ವಿವಿಧ ಗ್ರಾಮಗಳಲ್ಲಿ ಸರ್ಕಾರದ ಯೋಜನೆಗಳ ಜಾಗೃತಿ

ಹಾವೇರಿ19:  ವಾರ್ತ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ  ಗ್ರಾಮ ಸಂಪರ್ಕ ಕಾರ್ಯದಡಿ  ಶಿಗ್ಗಾಂವ ತಾಲೂಕಿನ ಮೋಟಹಳ್ಳಿ ಹಾಗೂ ಹನುಮನಹಳ್ಳಿ ಗ್ರಾಮಗಳಲ್ಲಿ ರವಿವಾರ ಜನಪದ ಹಾಡು  ಹಾಗೂ ಬೀದಿನಾಟಕ ಪ್ರದರ್ಶನ ಮಾಡುವುದರ ಮೂಲಕ ಸರ್ಕಾರದ ಯೋಜನೆಗಳನ್ನು  ಅರಿವು ಮೂಡಿಸಲಾಯಿತು. 

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ, ಕೃಷಿಹೊಂಡ, ಬದು  ನಿರ್ಮಾಣ ,ನರೇಗಾ, ರೈತರಿಗೆ ಕೃಷಿ ಕೇಂದ್ರದಿಂದ ದೊರೆಯುವ ಅನುಕೂಲಗಳು, ವಿವಿಧ ಪಿಂಚಣಿ ಯೋಜನೆ, ಸ್ವಚ್ಛತೆ, ಶೌಚಾಲಯ, ಶಿಕ್ಷಣಕ್ಕೆ ಸರ್ಕಾರದ  ಸಹಾಯ ಕುರಿತು ಜನಪದ ಗೀತೆ ಮತ್ತು ಬೀದಿನಾಟಕದ ಮೂಲಕ ಮಾಹಿತಿ ನೀಡಲಾಯಿತು.

ಕಾರ್ಯಕ್ರಮದಲ್ಲಿ ಸ್ಥಳೀಯ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮಗಳ ಮುಖಂಡರು ಇತರರು ಉಪಸ್ಥಿತರಿದ್ದರು.

      ಮಲ್ಲಿಕಾರ್ಜುನ  ಕಲಾ ತಂಡದ ಗುರುನಾಥ ಹುಬ್ಬಳ್ಳಿ, ಗದಿಗಯ್ಯ ಹಿರೇಮಠ, ಬಸವರಾಜ ಗೊಬ್ಬಿ, ಗುಡ್ಡಪ್ಪ ಬಾಕರ್ಿ, ನಾಗಪ್ಪ ಬೆನಳ್ಳಿ, ಮಂಜುನಾಥ ಕಮಡೊಳ್ಳಿ, ಮಧು ಬಂಕಾಪೂರ, ದೇವಿಕಾ ರಾಚಣ್ಣವರ   ಹಾಗೂ ಜನಪದ ಕಲಾ ತಂಡದ ವಿರೇಶ ಶಂಕಿನಮಠ, ವೀರಪ್ಪ ಎಲಿಗಾರ, ರೇಣುಕಾ ಕಾಳೆ, ಚೈತ್ರಾ ಕ್ಯಾಲಕೊಂಡ ಕಲಾವಿದರು ಸಕರ್ಾರದ ಯೋಜನೆಗಳ ಕುರಿತು ಜಾಗೃತಿ ಮೂಡಿಸಿದರು