ಹಾವೇರಿ,
ಏ.19,ಜಾಗತಿಕವಾಗಿ ಬಾಧಿಸುತ್ತಿರುವ ಕೋವಿಡ್-19 ಸೋಂಕಿನ ವಿರುದ್ಧ
ಹೋರಾಡುತ್ತಿರುವ ಪೊಲೀಸರು ಕೊರೊನಾ ವಾರಿಯರ್ಸ್ ನಂತೆ ಹಗಲಿರುಳು ದುಡಿಯುತ್ತಿದ್ದಾರೆ.
ಇಂತಹ ಕೊರೊನಾ ವಾರಿಯರ್ಸ್ ಪೊಲೀಸರಿಂದು ಹಿರೇಕೆರೂರು, ಹಂಸಬಾವಿ ಸೇರಿದಂತೆ ವಿವಿಧೆಡೆ
ವಾಹನದ ಮೂಲಕ ರಾಲಿ ನಡೆಸಿ ಕೊರೊನಾ ಕುರಿತು ಜಾಗೃತಿ ಮೂಡಿಸಿದರು. ಪೊಲೀಸರ ಈ
ಸೇವೆಗೆ ಹಿರೇಕೆರೂರು ಮತಕ್ಷೇತ್ರದ ಶಾಸಕರೂ ಆಗಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್
ವಂದನೆ ಸಲ್ಲಿಸಿ ಪೊಲೀಸರ ಕರ್ತವ್ಯ ಸೇವೆಯನ್ನು ಶ್ಲಾಘಿಸಿದರು.ಜಾಗೃತಿ ಜಾಥಾದಲ್ಲಿ
ಡಿವೈಎಸ್‌ಪಿ ಟಿ.ಸುರೇಶ್, ಎಸ್ಪಿ ಕೆ.ಜೆ.ದೇವರಾಜ್ ಎಎಸ್ಪಿ ಮಲ್ಲಿಕಾರ್ಜುನ್
ಸೇರಿದಂತೆ ಪಿಎಸ್‌ಐ ಸಿಪಿಐ , ಇತರೆ ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು.ಈ
ಸಂದರ್ಭದಲ್ಲಿ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ್ ಕೃಷಿ ಸಚಿವರಿಗೆ ಸಾಥ್
ನೀಡಿದರು.