ಲೋಕದರ್ಶನವರದಿ
ಮುದ್ದೇಬಿಹಾಳ16: ಕೊರೊನಾ ಸಂಕಟ ನಿವಾರಿಸಲು ಪ್ರಧಾನಮಂತ್ರಿಯವರು 20 ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿದ್ದು ಸ್ವಾಗತಾರ್ಹ. ಆದರೆ ಈ ಹಣ ಬಳಕೆದಾರರ ಪಾಲಗಬೇಕೆ ವಿನಃ ಕಬಳಿಕೆದಾರರ ಪಾಲಾಗಬಾರದು. ಇಂಥ ಅದ್ಭುತ ಪ್ಯಾಕೇಜ್ ಅನ್ನು ದೇಶದ ಜನತೆಗೆ ಕೊಟ್ಟ ಪ್ರಧಾನಿಯನ್ನು ಅಭಿನಂದಿಸಬೇಕು ಎಂದು ಕುಂಟೋಜಿ ಸಂಸ್ಥಾನ ಹಿರೇಮಠದ ಚನ್ನವೀರ ಸ್ವಾಮೀಜಿ ಹೇಳಿದ್ದಾರೆ.
ಇಲ್ಲಿನ ಕೃಷಿ ಇಲಾಖೆ ಕಚೇರಿ ಸಭಾಂಗಣದಲ್ಲಿ ಸ್ವದೇಶಪ್ರೇಮಿ ಮಹಾಂತೇಶ ಬೂದಿಹಾಳಮಠ ಅವರು ತಮ್ಮ ವಿವಾಹ ವಾಷರ್ಿಕೋತ್ಸವ ಸ್ಮರಣಾರ್ಥ ಶುಕ್ರವಾರ ಏರ್ಪಡಿಸಿದ್ದ ಮಾಧ್ಯಮದವರಿಗೆ ಸ್ವದೇಶಿ ವಸ್ತುಗಳ ಬಳಕೆ ಜಾಗೃತಿ ಮೂಡಿಸುವ ಕಾರ್ಯಕ್ರಮದ ದಿವ್ಯಸಾನಿಧ್ಯವಹಿಸಿ ಅವರು ಮಾತನಾಡುತ್ತಿದ್ದರು.
ಕೊರೊನಾ ವಿಷಯದಲ್ಲಿ ನಾವು ಅಂಜದೆ ಪಾಜಿಟಿವ್ ಆಗಿರಬೇಕು. ಲಾಕಡೌನ್ ನಮಗೆ ಕೂಡಿಬಾಳುವ ಪಾಠ ಕಲಿಸಿದ್ದು ಇದಿನ್ನೂ ಎರಡು ತಿಂಗಳು ಮುಗಿಯೋದೆ ಬೇಡ. ಇದು ತುಂಬಿದ ಪರಿವಾರವನ್ನು ನಿಮರ್ಿಸಿತು. ಪ್ರಕೃತಿ ಶುದ್ಧವಾಯಿತು. ಒಡೆದ ಮನಸ್ಸುಗಳು ಒಂದಾದವು. ಇಂಥ ಸನ್ನಿವೇಶದಲ್ಲಿ ಕೊರೊನಾ ವಾರಿಯರ್ಗಳ ಸೇವೆಯನ್ನು ಶ್ಲಾಘಿಸಬೇಕು ಎಂದರು.
ಮುಖ್ಯ ಅತಿಥಿಗಳಾಗಿದ್ದ ತಾಪಂ ಇಓ ಶಶಿಕಾಂತ ಶಿವಪುರೆ, ತಹಶೀಲ್ದಾರ್ ಜಿ.ಎಸ್.ಮಳಗಿ, ಪುರಸಭೆ ಮುಖ್ಯಾಧಿಕಾರಿ ಗೋಪಾಲ ಕಾಸೆ ಅವರು ಕೊರೊನಾ ನಿಯಂತ್ರಣದಲ್ಲಿ ಮಾಧ್ಯಮದವರ ಸಹಕಾರದ ಕುರಿತು, ಸನ್ಮಾನಿತರ ಪರವಾಗಿ ವಿಜಯಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಡಿ.ಬಿ.ವಡವಡಗಿ ಮಾತನಾಡಿದರು.
ಸಹಾಯಕ ಕೃಷಿ ನಿದರ್ೇಶಕ ಎಂ.ಎಚ್.ಯರಝರಿ, ಕಾರ್ಯಕ್ರಮ ರೂವಾರಿ ಮಹಾಂತೇಶ ಬೂದಿಹಾಳಮಠ ವೇದಿಕೆಯಲ್ಲಿದ್ದರು. ಉಮಾಶಂಕರ ಕಲ್ಯಾಣಮಠ, ಸದಾಶಿವ ಹಿರೇಮಠ, ಸದು ಮಠ, ವಿಕ್ರಮ ಓಸ್ವಾಲ್, ಹಣಮಂತ ನಲವಡೆ, ರಾಜು ಬಳ್ಳೊಳ್ಳಿ, ಬಂಗಾರಗುಂಡ ಮತ್ತಿತರರು ಉಪಸ್ಥಿತರಿದ್ದರು.
ಕಾಗರ್ಿಲ್ ವೀರಯೋಧರ ಸ್ಮಾರಕ ನಿಮರ್ಾಣ ಸಮಿತಿ ಅಧ್ಯಕ್ಷ ಕಿರಣಗೌಡ ಪಾಟೀಲ ಮಹಾಂತೇಶಗೆ ಪುಸ್ತಕ ಕಾಣಿಕೆ ನೀಡಿ, ಮಾಧ್ಯಮದವರ ಪರವಾಗಿ ಡಿ.ಬಿ.ವಡವಡಗಿ ಮಹಾಂತೇಶ ಅವರನ್ನು ಸನ್ಮಾನಿಸಿದರು. ಸ್ವದೇಶಿ ದಿನಬಳಕೆ ವಸ್ತುಗಳ ಕಾಣಿಕೆ ನೀಡಿ, ಶಾಲು ಹೊದೆಸಿ ಪುಷ್ಪವೃಷ್ಟಿಗೈಯುವ ಮೂಲಕ ಮಾಧ್ಯಮದವರನ್ನು, ಪುಷ್ಪವೃಷ್ಟಿಗರೆಯುವ ಮೂಲಕ ಸ್ವಾಮೀಜಿ, ಅಧಿಕಾರಿಗಳನ್ನು ಗೌರವಿಸಲಾಯಿತು. ಸಿಆರ್ಪಿ ಟಿ.ಡಿ.ಲಮಾಣಿ ಸ್ವಾಗತಿಸಿ ನಿರೂಪಿಸಿದರು.