ಅರಿವಿನ ಮನೆ ನೇರ ಪ್ರಸಾರ ಕಾರ್ಯಕ್ರಮ
ಹುಬ್ಬಳ್ಳಿ 10 : ಬಸವ ಸಮಿತಿ, ಬಸವ ಕೇಂದ್ರದ ಆನ್‌ಲೈನ್ ಅರಿವಿನ ಮನೆ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಕಳೆದ 30 ವಾರಗಳಿಂದ ಬಿತ್ತರಗೊಳ್ಳುತ್ತಿರುವ ಶೂನ್ಯ ಸಂಪಾದನೆ ಅನುಭಾವ ಮಾಲಿಕೆಯಲ್ಲಿ ಅನುಭಾವ ನೀಡುತ್ತಿರುವ ಅನುಭಾವಿಗಳು, ಶರಣ ತತ್ವ ಚಿಂತಕರು, ಸಿ.ಎಸ್.ಐ ಕಾಲೇಜಿನ ಪ್ರಾಧ್ಯಾಪಕ ಡಾ. ಶಂಭು ಹೆಗಡಾಳ ಅವರು ಪ್ರತಿ ಶನಿವಾರ ಶೂನ್ಯ ಸಂಪಾದನೆ ಕುರಿತು ನಿರಂತರವಾಗಿ ಅಪಾರ ಪಾಂಡಿತ್ಯ ಪೂರ್ಣ ಅನುಭಾವ ಉಣಬಡಿಸುತ್ತಿರುವ ಶುಭ ಸಂದರ್ಭದಲ್ಲಿ ಬಸವ ಕೇಂದ್ರದ ಆನ್‌ಲೈನ್ ಅರಿವಿನ ಮನೆ ಕಾರ್ಯಕ್ರಮದ ನಂತರ ಡಾ. ಶಂಭು ಹೆಗಡಾಳ ಅವರನ್ನು ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಗೌರವ ಪೂರ್ವಕವಾಗಿ ಹೆಮ್ಮೆ, ಅಭಿಮಾನದಿಂದ ಹುತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು. ಶುಭಾಶಯ ಕೋರಿದರು. ಬಸವ ಸಮಿತಿಯ ಕಾರ್ಯಕ್ರಮ ಸಂಯೋಜಕರಾದ ಎಂ.ಜಿ.ಮುಳಕೂರ ಅವರಿಗೆ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಮಾಲಾರೆ್ಣ ಮಾಡಿ, ಗೌರವ ಪೂರ್ವಕವಾಗಿ ಹೆಮ್ಮೆ, ಅಭಿಮಾನದಿಂದ ಸನ್ಮಾನಿಸಿದರು. ಹುತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು. ಶುಭಾಶಯ ಕೋರಿದರು. ಸೋಹನ ಸುರೇಶ ಹೊರಕೇರಿ, ಡಾ. ಶಂಭು ಹೆಗಡಾಳ ಅವರ ಗುರುಗಳಾದ ಶೇಖರ ಕುಂದಗೋಳ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಅಧ್ಯಕ್ಷ, ನಿವೃತ್ ಪ್ರಾಚಾರ್ಯ ಪ್ರೊ ಎಸ್.ಎಂ.ಸಾತ್ಮಾರ, ಸೋಹನ ಸುರೇಶ ಹೊರಕೇರಿ, ಕಲ್ಲಪ್ಪ ಚಂದನಮಟ್ಟಿ, ಸಾವಿತ್ರಿ ಘಟಿಗಳ್ಗಾವರ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ‌್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ, ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ಶೈಲಾ ಲಂಗೋಟಿ, ಅನಸೂಯಾ ಬಿರಾದಾರ, ನಿರಂಜನ ಹಂಚಿನಾಳ, ವೀರ್ಪ ಘಟಿಗಳ್ಗಾವರ, ಎಸ್.ಕೆ.ಕುಂದರಗಿ, ಶ್ರೀಶೈಲ್ ಹುದ್ದಾರ, ಪ್ರವೀಣ,ಮುಂತಾದವರು ಇದ್ದರು.