ಮನಗೂಳಿಯವರಿಗೆ ಪಿಎಚ್.ಡಿ ಪದವಿ ಪ್ರದಾನ
ಬಾಗಲಕೋಟೆ 05: ನಗರದ ಬಿ.ವ್ಹಿ.ವ್ಹಿ.ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದ ಸಂಶೋಧನ ಕೇಂದ್ರದ ಸಂಶೋಧನ ವಿದ್ಯಾರ್ಥಿ ಹಾಗೂ ಮುಧೋಳದ ದಾನಮ್ಮದೇವಿ ಮಹಿಳಾ ಮಹಾವಿದ್ಯಾಲಯದ ಉಪನ್ಯಾಸಕರಾದ ಪವಾಡೆಪ್ಪ ಮನಗೂಳಿ ಅವರಿಗೆ ಕನ್ನಡ ವಿಶ್ವವಿದ್ಯಾಲಯ ಹಂಪಿ ಪಿಎಚ್.ಡಿ ಪದವಿ ಪ್ರದಾನ ಮಾಡಿದೆ.
ಪವಾಡೆಪ್ಪ ಮನಗೂಳಿ ಅವರು ಸಲ್ಲಿಸಿದ “ಕೃಷ್ಣಾ ಮೇಲ್ದಂಡೆ ಯೋಜನೆಯ ಚಾರಿತ್ರಿಕ ಮತ್ತು ಸಾಂಸ್ಕೃತಿಕ ಅಧ್ಯಯನ” (ಬಾಗಲಕೋಟೆ ಜಿಲ್ಲೆಯನ್ನು ಅನುಲಕ್ಷಿಸಿ) ಮಹಾಪ್ರಬಂಧಕ್ಕೆ ಪಿಎಚ್.ಡಿ. ಪದವಿ ಸಂದಿದೆ. ಇವರು ನಗರದ ಎಸ್.ಆರ್.ಎನ್.ಕಲಾ ಹಾಗೂ ಎಂ.ಬಿ.ಶಿರೂರ ವಾಣಿಜ್ಯ ಮಹಾವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ.ಜಿ.ಬಿ.ಕುಲಕರ್ಣಿಯವರ ಮಾರ್ಗದರ್ಶನದಲ್ಲಿ ಅಧ್ಯಯನ ಕೈಗೊಂಡಿದ್ದರು.
ಪದವಿ ಪಡೆದ ಮನಗೂಳಿಯವರಿಗೆ ಬಿ.ವ್ಹಿ.ವ್ಹಿ.ಸಂಘದ ಕಾರ್ಯಾಧ್ಯಕ್ಷರಾದ ವೀರಣ್ಣ ಸಿ. ಚರಂತಿಮಠ, ಗೌರವ ಕಾರ್ಯದರ್ಶಿಗಳಾದ ಮಹೇಶ ಎನ್. ಅಥಣಿ, ಕಾಲೇಜುಗಳ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಗುರುಬಸವ ಎಸ್.ಸೂಳಿಭಾವಿ, ಆಡಳಿತಾಧಿಕಾರಿಗಳಾದ ವ್ಹಿ.ಆರ್. ಶಿರೋಳ, ಡಾ. ವ್ಹಿ. ಎಸ್. ಕಟಗಿಹಳ್ಳಿಮಠ, ಪ್ರಾಚಾರ್ಯ ಎಸ್. ಆರ್. ಮೂಗನೂರಮಠ, ಸಂಯೋಜನಾಧಿಕಾರಿ ಡಾ.ಎಸ್.ಡಿ.ಕೆಂಗಲಗುತ್ತಿ ಮಹಾವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.