ಮಹಿಳಾ ಮತ್ತು ಮಕ್ಕಳ ಇಲಾಖೆಗೆ ಪ್ರಶಸ್ತಿ

Award for Women and Children Department Kustagi

ಕುಷ್ಟಗಿ 15: ಹನುಮಸಾಗರ ಜಿಲ್ಲೆಯ ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಸಾಧನೆ ಮಾಡಿದ ಕುಷ್ಟಗಿ ತಾಲೂಕಿನ ಮಹಿಳಾ ಮತ್ತು ಮಕ್ಕಳ ಇಲಾಖೆಯ ಮೇಲ್ವಿಚಾರಕಿ ಹಾಗೂ ಸಿಬ್ಬಂದಿಗಳಿಗೆ ಅತ್ಯುತ್ತಮ ಪ್ರಶಸ್ತಿ ಲಭಿಸಿದೆ.  

ಹನುಮನಾಳ ಹೋಬಳಿಯ ಹನುಮನಾಳ ಬ ವಲಯದ ಅಂಗನವಾಡಿ ಮೇಲ್ವಿಚಾರಕಿ ಕಲಾವತಿ ಭಕ್ತನಕೊಪ್ಪ, ಮುದೇನೂರು ವಲಯದ ಮುದ್ದಲಗುಂದಿ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಕವಿತಾ ಮಾಲಿಪಾಟೀಲ್, ಹನುಮನಾಳ ಎರಡನೇ ಅಂಗನವಾಡಿ ಕೇಂದ್ರದ ಅಂಗನವಾಡಿ ಸಹಾಯಕಿ ಹುಲಿಗೆಮ್ಮ ಇಳಕಲ್ ಇವರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಇವರೊಂದಿಗೆ ಹನುಮಸಾಗರದ ಅಸಾಧಾರಣ ಪ್ರತಿಭೆಯಾದ ಸಮೃದ್ಧಿ ಪಾಟೀಲ್ ಗಾಂಧಾರ ಕಲೆಯ ಸಾಧನೆಗೆ ಪ್ರಶಸ್ತಿಯನ್ನು ವಿತರಿಸಿದೆ.