ಮೆಲ್ಬೊರ್ನ್, ಜ.24 : ದಾಖಲೆಯ ಗ್ರ್ಯಾನ್ ಸ್ಲ್ಯಾಮ್ ವಿಜೇತೆ ಅಮೆರಿಕದ ಸೆರೆನಾ ವಿಲಿಯಮ್ಸ್ ಹಾಗೂ ಮೂರನೇ ಶ್ರೇಯಾಂಕಿತ ಜಪಾನ್ ನ ನವೋಮಿ ಒಸಾಕ ಅವರು ಆಸ್ಟ್ರೇಲಿಯನ್ ಗ್ರ್ಯಾನ್ ಸ್ಲ್ಯಾಮ್ ಟೂರ್ನಿಯ ಮೂರನೇ ಸುತ್ತಿನಲ್ಲಿ ನಿರಾಸೆ ಅನುಭವಿಸಿದ್ದಾರೆ.
ಶುಕ್ರವಾರ ರೋಡ್ ಲಾವೇರ್ ಅರೇನಾದಲ್ಲಿ ನಡೆದ ಮಹಿಳೆಯ ಸಿಂಗಲ್ಸ್ ಪಂದ್ಯದಲ್ಲಿ ಸೆರೆನಾ ವಿಲಿಯಮ್ಸ್ 4-6, 7-6, 5-7 ರಿಂದ ಚೀನಾದ ಕ್ವಿಂಗ್ ವಾಂಗ್ ವಿರುದ್ಧ ನಿರಾಸೆ ಅನುಭವಿಸಿದ್ದರು. 24ನೇ ಗ್ರ್ಯಾನ್ ಸ್ಲ್ಯಾಮ್ ಪ್ರಶಸ್ತಿ ಗೆಲ್ಲುವ ಸೆರೆನಾ ಆಸೆಗೆ ಪೆಟ್ಟು ಬಿದ್ದಿದೆ.
2003, 2005, 2007, 2009, 2010, 2015, 2017ರಲ್ಲಿ ಸೆರೆನಾ ಟೂರ್ನಿಯ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದರು. ಇದೇ ಟೂರ್ನಿಯಲ್ಲಿ ಸೆರೆನಾ ಕೊನೆಯ ಬಾರಿಗೆ ಗ್ರ್ಯಾನ್ ಸ್ಲ್ಯಾಮ್ ಟ್ರೋಫಿಗೆ ಮುತ್ತಿಟ್ಟಿದ್ದರು.
ಒಸಾಕ 3-6, 4-6 ರಿಂದ ಅಮೆರಿಕದ ಕೊಕೊ ಗೌಫ್ ರಿಂದ ಸೋಲು ಕಂಡರು. ಒಂದುಬ ಗಂಟೆ ಏಳು ನಿಮಿಷ ನಡೆದ ಪಂದ್ಯದಲ್ಲಿ ನಿರಾಸೆ ಕಂಡರು.
ಆಸ್ಟ್ರೇಲಿಯಾದ ಆಶ್ಲೇ ಬಾರ್ಟಿ 6-3, 6-2 ರಿಂದ ಎಲೆನಾ ರೈಬಕಿನಾ ಅವನರನ್ನು ಮಣಿಸಿ 16ನೇ ಸುತ್ತಿಗೆ ಅರ್ಹತೆ ಪಡೆದರು.