ಆಸ್ಟ್ರೇಲಿಯಾ ಓಪನ್ : ಕ್ವಾರ್ಟರ್ ಪೈನಲ್‌ ಪ್ರವೇಶಿಸಿದ ಹಲೆಪ್, ಥೀಮ್

ಮೆಲ್ಬೋರ್ನ್, ಜ 27, ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಓಪನ್ ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ವಿಶ್ವದ ಮೂರನೇ ಶ್ರೇಯಾಂಕಿತೆ ಸಿಮೋನಾ ಹಲೆಪ್ ಅವರು ಕ್ವಾರ್ಟರ್ ಪೈನಲ್ಸ್ ಪ್ರವೇಶಿಸಿದ್ದಾರೆ.ಸೋಮವಾರ ನಡೆದ ಮಹಿಳೆಯರ ಸಿಂಗಲ್ಸ್ ಅಂತಿಮ 16ರ ಹಂತದ ಪಂದ್ಯದಲ್ಲಿ ಅತ್ಯದ್ಭುತ ಪ್ರದರ್ಶನ ತೋರಿದ ಸಿಮೋನಾ ಹಲೆಪ್ ಅವರು ಎಲಿಸ್ ಮರ್ಟೆನ್ಸ್‌ ವಿರುದ್ಧ 6-4, 6-4 ಅಂತರದಲ್ಲಿ ಗೆದ್ದು ಎಂಟರ ಘಟ್ಟಕ್ಕೆ ಲಗ್ಗೆ ಇಟ್ಟಿದ್ದಾರೆ. ಆ ಮೂಲಕ ವರ್ಷದ ಮೊದಲ ಗ್ರ್ಯಾನ್ ಸ್ಲ್ಯಾಮ್ ಗೆಲ್ಲುವ ಹಾದಿಯತ್ತ ಹೆಜ್ಜೆ ಇಟ್ಟಿದ್ದಾರೆ. ಎರಡು ಗ್ರ್ಯಾನ್ ವಿಜೇತೆ ಹಲೆಪ್ ಅವರ ಪಾಲಿಗೆ ಆಸ್ಟ್ರೇಲಿಯಾ ಓಪನ್ ಕ್ವಾರ್ಟರ್ ಪೈನಲ್ ತಲುಪಿರುವುದು ಇದು ನಾಲ್ಕನೇ ಬಾರಿಯಾಗಿದೆ. ಪುರುಷರ ಸಿಂಗಲ್ಸ್ ಪ್ರೀ ಕ್ವಾರ್ಟರ್ ಪೈನಲ್ ಹಣಾಹಣಿಯಲ್ಲಿ ಡೊಮಿನಿಚ್‌ ಥೀಮ್ 6-2, 6-4, 6-4 ಅಂತರದಲ್ಲಿ ಮೊನ್ಫಿಲ್ಸ್‌ ವಿರುದ್ಧ ಗೆದ್ದು ಕ್ವಾರ್ಟರ್ ಫೈನಲ್‌ ಪ್ರವೇಶ ಮಾಡಿದ್ದಾರೆ.