ಮೆಲ್ಬೊರ್ನ್, ಜ.28 : ವಿಶ್ವದ ಮಾಜಿ ನಂಬರ್ 1 ಆಟಗಾರ ಹಾಗೂ ದಾಖಲೆಯ ಗ್ರ್ಯಾನ್ ಸ್ಲ್ಯಾಮ್ ಗಳ ಒಡೆಯ ಸ್ವಿಟ್ಜರ್ ಲೆಂಡ್ ನ ರೋಜರ್ ಫೆಡರರ್ ಅವರು ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್ ಸ್ಲ್ಯಾಮ್ ಟೂರ್ನಿಯ ಸೆಮಿಫೈನಲ್ಸ್ ಗೆ ಲಗ್ಗೆ ಇಟ್ಟಿದ್ದಾರೆ.
ಮಂಗಳವಾರ ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಫೆಡರರ್ ಪ್ರಯಾಸದ ಜಯ ಸಾಧಿಸಿದರು. ಇವರು ಐದು ಸೆಟ್ ಗಳ ಪಂದ್ಯದಲ್ಲಿ ಅಮೆರಿಕದ ಟೆನಿಸ್ ಸ್ಯಾಂಡ್‌ಗ್ರೆನ್ ಅವರನ್ನು ಸದೆ ಬಡೆದರು. ಫೆಡರರ್ 6-2, 2-6, 2-6, 7-6, 6-3 ರಿಂದ ಟೆನಿಸ್ ಸ್ಯಾಂಡ್‌ಗ್ರೆನ್ ಮಣಿಸಿ ಮುನ್ನಡೆದರು.
21ನೇ ಗ್ರ್ಯಾನ್ ಸ್ಲ್ಯಾಮ್ ಕನಸಿನಲ್ಲಿರುವ ಫೆಡರರ್ ಎರಡು ವರ್ಷದ ಬಳಿಕ ಮತ್ತೊಮ್ಮೆ ಟೂರ್ನಿಯ ಚಾಂಪಿಯನ್ ಪಟ್ಟ ಅಲಂಕರಿಸುವ ಕನಸು ಕಾಣುತ್ತಿದ್ದಾರೆ. 2019ರಲ್ಲಿ ಫೆಡರರ್ ಆಸ್ಟ್ರೇಲಿಯನ್ ಓಪನ್ ಟೂರ್ನಿಯ ಪ್ರಿ ಕ್ವಾರ್ಟರ್ ಫೈನಲ್ಸ್ ನಲ್ಲಿ ನಿರಾಸೆ ಅನುಭವಿಸಿದ್ದರು. ಅಲ್ಲದೆ ಕಳೆದ ವರ್ಷ ವಿಂಬಲ್ಡನ್ ಪ್ರಶಸ್ತಿ ಮುತ್ತಿಟ್ಟು ಸಂಭ್ರಮಿಸಿದ್ದರು.
ಫೆಡರರ್ 2004, 2006, 2007, 2010, 2017, 2018ರಲ್ಲಿ ಆಸೀಸ್ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದರು.