ಏಕದಿನ ಸರಣಿಯಲ್ಲಿ ಭಾರತವನ್ನು ಆಸ್ಟ್ರೇಲಿಯಾ ಮಣಿಸಲಿದೆ: ಪಾಂಟಿಂಗ್

ನವದೆಹಲಿ, ಜ 13 :                    ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಮಂಗಳವಾರ ಆರಂಭವಾಗಲಿರುವ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಆ್ಯರೋನ್ ಫಿಂಚ್  ನಾಯಕತ್ವದ ಆಸ್ಟ್ರೇಲಿಯಾ ತಂಡ ಆತಿಥೇಯ ಭಾರತ ತಂಡವನ್ನು ಸೋಲಿಸಲಿದೆ ಎಂದು ಆಸೀಸ್ ಮಾಜಿ ನಾಯಕ ರಿಕಿ ಪಾಂಟಿಂಗ್ ಅಭಿಪ್ರಾಯಪಟ್ಟಿದ್ದಾರೆ."ಕಳೆದ ಐಸಿಸಿ ಏಕದಿನ ವಿಶ್ವಕಪ್ ಹಾಗೂ ಬೇಸಿಗೆಯಲ್ಲಿ ಟೆಸ್ಟ್ ವಿಭಾಗದಲ್ಲಿ ತೋರಿರುವ ಪ್ರದರ್ಶನ ಜತೆಗೆ, ಭಾರತ ತಂಡವನ್ನು ಕಳೆದ ಏಕದಿನ ಸರಣಿಯಲ್ಲಿ ಸೋಲಿಸಿರುವ ವಿಶ್ವಾಸದಲ್ಲಿರುವ ಆಸ್ಟ್ರೇಲಿಯಾ ತಂಡ ಮತ್ತೊಮ್ಮೆ ಆತಿಥೇಯರನ್ನು ಸೋಲಿಸಲು ಸಜ್ಜಾಗಿದೆಟ್ವೀಟರ್ ನಲ್ಲಿ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿರುವ ಪಾಂಟಿಂಗ್, " ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನದ ವಿರುದ್ಧ ತವರು ಟೆಸ್ಟ್ ಸರಣಿಗಳನ್ನು ವೈಟ್ ವಾಶ್ ಮಾಡಿಕೊಂಡಿದೆ. ಅದೇ ಸಂಘಟಿತ ಪ್ರದರ್ಶನವನ್ನು ಭಾರತ ವಿರುದ್ಧ ತೋರಲಿದೆ," ಎಂದು ಹೇಳಿದ್ದಾರೆ.ಕಳೆದ ವರ್ಷ ಅವರದೇ ನೆಲದಲ್ಲಿ ಭಾರತ ನಮ್ಮ ವಿರುದ್ಧ 2-3 ಅಂತರದಲ್ಲಿ ಏಕದಿನ ಸರಣಿಯಲ್ಲಿ ಸೋಲು ಅನುಭವಿಸಿದ್ದರು. ಹಾಗಾಗಿ, ಈ ಬಾರಿ ಆಸ್ಟ್ರೇಲಿಯಾ ವಿರುದ್ಧ ಸೇಡು ತೀರಿಸಿಕೊಳ್ಳುವ ಹಂಬಲವನ್ನು ಹೊಂದಿದೆ.ಬೇಸಿಗೆ ಟೆಸ್ಟ್ ಸರಣಿಯಲ್ಲಿ ರನ್ ಹೊಳೆ ಹರಿಸಿರುವ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಮಾರ್ನಸ್ ಲಾಬುಶೇನ್ ಏಕದಿನ ಮಾದರಿಗೂ ತಮ್ಮ ಲಯವನ್ನು ವರ್ಗಾವಣೆ ಮಾಡಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ."ಅವರು (ಲಾಬುಶೇನ್) ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ನೆರವಾಗಲಿದ್ದಾರೆ.  ಸ್ಪಿನ್ ಬೌಲಿಂಗ್ ಎದುರಿಸುವಲ್ಲಿ ಬಲಿಷ್ಟವಾಗಿದ್ದಾರೆ. ಜತೆಗೆ, ವಿಕೆಟ್ ಗಳ ಮಧ್ಯೆ ಅತ್ಯುತ್ತಮವಾಗಿ ಓಡಲಿದ್ದಾರೆ. ಫೀಲ್ಡಿಂಗ್ ನಲ್ಲಿ ಚುರುಕಾಗಿದ್ದು, ಅಗತ್ಯವೆನಿಸದರೆ, ಲೆಗ್ ಸ್ಪಿನ್ ಕೂಡ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಮಾರ್ನಸ್ ಲಾಬುಶೇನ್ ತಂಡಕ್ಕೆ ಅತ್ಯಂತ ಮೌಲ್ಯಯುತ ಆಟಗಾರ," ಎಂದು ಶ್ಲಾಘಿಸಿದ್ದಾರೆ.