ನಿಗದಿಯಂತೆ ಟಿ-20 ವಿಶ್ವಕಪ್ ನಡೆಸುವ ಗುರಿ ಹೊಂದಿರುವ ಆಸ್ಟ್ರೇಲಿಯಾ

ಮೆಲ್ಬೊರ್ನ್, ಮಾ.19,ಕೊರೊನಾ ಭೀತಿಯ ಹೊರತಾಗಿಯೂ ಆಸ್ಟ್ರೇಲಿಯಾ ಪ್ರಸಕ್ತ ವರ್ಷ ಆಯೋಜಿಸಲಿರುವ ಟಿ-20 ವಿಶ್ವಕಪ್ ಟೂರ್ನಿಯನ್ನು ನಿಗದಿತ ವೇಳಾಪಟ್ಟಿಯಂತೆ ನಡೆಸಲು ನಿರ್ಧರಿಸಿದೆ. ಆದರೆ, ಸದ್ಯದ ಪರೀಸ್ಥಿತಿಯ ಮೇಲೆ ಗಮನ ಹರಿಸುತ್ತಿದೆ. ಆಸ್ಟ್ರೇಲಿಯಾ ಅಕ್ಟೋಬರ್ ನಲ್ಲಿ ಈ ಟೂರ್ನಿ ಆಯೋಜಿಸಲಿದ್ದು, ಏಳು ಮೈದಾನಗಳಲ್ಲಿ ಪಂದ್ಯಗಳು ನಡೆಯಲಿವೆ. ಹಾಲಿ ಚಾಂಪಿಯನ್ ವೆಸ್ಟ್ ಇಂಡೀಸ್ ಪ್ರಶಸ್ತಿ ಉಳಿಸಿಕೊಳ್ಳುವ ತವಕದಲ್ಲಿದೆ.
“ಇನ್ನು ಕೆಲ ವಾರ ಅಥವಾ ತಿಂಗಳೊಳಗೆ ಕ್ರೀಡಾ ಚಟುವಟಿಕೆಗಳು ಪ್ರಾರಂಭವಾಗುತ್ತವೆ ಎಂಬ ಆಶಯ ನಮ್ಮದಾಗಿದೆ. ಸದ್ಯ ವಿಶ್ವ ಮಹಾಮಾರಿಯ ವಿರುದ್ಧ ಹೋರಾಟ ನಡೆಸಿದೆ. ಟಿ-20 ವಿಶ್ವಕಪ್ ವೇಳೆಗೆ ಈ ವೈರಸ್ ಹತೋಟಿಗೆ ಬರಬಹುದು ಎಂಬ ಆಶಯ ವಿದೆ” ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಮುಖ್ಯಸ್ಥ ಕೇವಿನ್ ರಾಬರ್ಟ್ ಗುರುವಾರ ತಿಳಿಸಿದ್ದಾರೆ. ಎಂಸಿಜೆಯಲ್ಲಿ ನವಂಬರ್ 15 ರಂದು ನಡೆಯಲಿರುವ ಫೈನಲ್ ಪಂದ್ಯ ಅಭಿಮಾನಿಗಳಿಂದ ತುಂಬಲಿದೆ” ಎಂದಿದ್ದಾರೆ. ಆಸ್ಟ್ರೇಲಿಯಾ ವನಿತೆಯರ ತಂಡ ಮಾ.8ರಂದು ಮೆಲ್ಬೋರ್ನ್ ನಲ್ಲಿ 86000 ಅಭಿಮಾನಿಗಳ ಸಮ್ಮುಖದಲ್ಲಿ ಪ್ರಶಸ್ತಿ ಉಳಿಸಿಕೊಂಡು, ಐದನೇ ಬಾರಿಗೆ ಟಿ-20 ವಿಶ್ವಕಪ್ ಗೆ ಮುತ್ತಿಟ್ಟಿದೆ. ಆಸ್ಟ್ರೇಲಿಯಾದಲ್ಲಿ ಈಗಾಗಲೇ 500ಕ್ಕೂ ಹೆಚ್ಚು ಕೊರೊನಾ ಪಿಡಿತರು ಪತ್ತೆ ಯಾಗಿದ್ದು, ಆರು ಜನ ಸವಾನ್ನಪ್ಪಿದ್ದಾರೆ. ಇದನ್ನು ತಡೆಯಲು ಸರ್ಕಾರಗಳು ಸಹ ಅಗತ್ಯ ಕ್ರಮ ಕೈಗೊಂಡಿದೆ.