ಆಸೀಸ್ ಮಹಿಳಾ ಕ್ರಿಕೆಟರ್‌ ಸೌಂದರ್ಯಕ್ಕೆ ಮನಸೋತ ಮುರಳಿ

ನವದೆಹಲಿ, ಏ 16 ,ಭಾರತ ಕ್ರಿಕೆಟ್ ತಂಡದಲ್ಲಿ ಅವಕಾಶ ವಂಚಿತಗೊಂಡಿರುವ ಆರಂಭಿಕ ಬ್ಯಾಟ್ಸ್‌ಮನ್‌ ಮುರಳಿ ವಿಜಯ್‌ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್‌ ಆಲ್‌ರೌಂಡರ್‌ ಎಲೀಸ್‌ ಪೆರ್ರಿ ಅವರ ಸೌಂದರ್ಯಕ್ಕೆ ಮಾರುಹೋಗಿದ್ದಾರೆ.ಕೊರೊನಾ ವೈರಸ್‌ ಕಾರಣ ಕ್ರೀಡಾಲೋಕ ಅಕ್ಷರಶಃ ಸ್ತಬ್ಧವಾಗಿದ್ದು, ಈ ಸಂದರ್ಭದಲ್ಲಿ ಕ್ರಿಕೆಟಿಗರು ಸೇರಿದಂತೆ ಹಲವು ಕ್ರೀಡಾತಾರೆಯರು ಸಾಮಾಜಿಕ ತಾಣಗಳ ಮೂಲಕ ಅಭಿಮಾನಿಗಳ ಜತೆ ಚರ್ಚೆ ನಡೆಸುವುದರಲ್ಲಿಸಕ್ರಿಯರಾಗಿದ್ದಾರೆ. ಇನ್‌ಸ್ಟಾಗ್ರಾಮ್‌ ನೇರ ಸಂದರ್ಶನದ ವೇಳೆ   'ನೀವು ಯಾವ ಇಬ್ಬರು ವ್ಯಕ್ತಿಗಳ ಜತೆಗೆ ಡಿನ್ನರ್‌ ಗೆ ಹೋಗಲು ಬಯಸುತ್ತೀರಿ?' ಎಂದು ಮುರಳಿ ವಿಜಯ್‌ ಅವರನ್ನು ಪ್ರಶ್ನಿಸಲಾಗಿತ್ತು. ಅಚ್ಚರಿ ಎಂಬಂತೆ ವಿಜಯ್‌ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್‌ ತಂಡದ ಆಟಗಾರ್ತಿಯ ಹೆಸರನ್ನು ಮೊದಲು ಪ್ರಸ್ತಾಪಿಸಿದ್ದರು. ಬಳಿಕ ಭಾರತ ತಂಡದ ಸ್ಟಾರ್‌ ಓಪನರ್‌ ಶಿಖರ್‌ ಧವನ್‌ ಅವರ ಹೆಸರನ್ನು ಹೇಳಿದ್ದಾರೆ. "ಮೊದಲು ಎಲೀಸ್‌ ಪೆರ್ರಿ. ಏಕೆಂದರೆ ಆಕೆ ಬಹಳ ಸುಂದರವಾಗಿದ್ದಾಳೆ. ಮತ್ತೊಂದು ಶಿಖರ್‌ ಧವನ್‌. ಆತ ಬಹಳ ತಮಾಶೆಯ ವ್ಯಕ್ತಿ. ಆದರೆ ನಾನು ತಮಿಳಿನಲ್ಲಿ ಮಾತನಾಡುತ್ತೇನೆ ಆತ ಹಿಂದಿಯಲ್ಲಿ ಮಾತನಾಡುತ್ತಿರುತ್ತಾನೆ ಅಷ್ಟೆ," ಎಂದಿದ್ದಾರೆ.