ಹೊಸ ವಾರಂಟಿ, ರಸ್ತೆ ಬದಿಯ ನೆರವಿನ ಗಡುವನ್ನು ವಿಸ್ತರಿಸಿದೆ 'ಆಡಿ ಇಂಡಿಯಾ'

ಮುಂಬೈ, ನ 5:  ಜರ್ಮನಿಯ ಲಕ್ಸುರಿ ಮೇಜರ್ 'ಆಡಿ' ಕಂಪನಿ ಹೊಸದಾಗಿ 'ಲೈಫ್ ಟೈಮ್ ವ್ಯಾಲ್ಯೂ ಸರ್ವಿಸಸ್' ಯೋಜನೆಯನ್ನು ಪರಿಚಯಿಸಿದ್ದು, ಈ ಮೂಲಕ ಭಾರತೀಯ ಕಾರುಗಳ ವಾರಂಟಿಯನ್ನು 7 ವರ್ಷಗಳಿಗೆ, ರಸ್ತೆ ಬದಿಯ ನೆರವನ್ನು 11 ವರ್ಷಗಳವರೆಗೆ ಮತ್ತು ಹೊಂದಿಕೆಯಾಗುವ ಸರ್ವಿಸ್ ಯೋಜನೆಗಳನ್ನು 8 ವಿಸ್ತರಿಸಿದೆ.  

ಅತ್ಯುತ್ತಮ ಸರ್ವಿಸ್ ಹಾಗೂ ಸೇವೆಯ ಭರವಸೆ ನೀಡುವ 'ಆಡಿ' ಇಂಡಿಯಾ, ಗ್ರಾಹಕರಿಗೆ ವಿಭಿನ್ನ ಶ್ರೇಣಿಯ, ವಿಭಿನ್ನ ಮೈಲೇಜ್ ನ ವಾಹನಗಳನ್ನು ಪರಿಚಯಿಸುತ್ತಿದೆ.

ಈ ನೂತನ ಯೋಜನೆ ಕುರಿತು ಪ್ರತಿಕ್ರಿಯಿಸಿದ ಆಡಿ ಇಂಡಿಯಾದ ಮುಖ್ಯಸ್ಥ ಬಲ್ ಬೀರ್ ಸಿಂಗ್ ದಿಲ್ಲೋನ್, ಗ್ರಾಹಕರ ಪಯಣವನ್ನು ಮೌಲ್ಯಯುತವಾಗಿಸುವತ್ತ ನಾವು ಯಾವಾಗಲೂ ಗಮನ ಹರಿಸಿದ್ದೇವೆ. ಉತ್ತಮ ಸೇವೆಗಳನ್ನು ಪಡೆಯುವುದು ಅವರ ಹಕ್ಕು. 'ಲೈಫ್ ಟೈಮ್ ವ್ಯಾಲ್ಯೂ ಸರ್ವಿಸ್' ನೊಂದಿಗೆ ನಾವು ಗ್ರಾಹಕರಿಗೆ ವಿಸ್ತೃತ ಅವಧಿಯ ವಾರಂಟಿ ಮತ್ತು ಹೆಚ್ಚುವರಿ ಸೇವೆಗಳನ್ನು ಒದಗಿಸುತ್ತಿದ್ದೇವೆ ಎಂದರು.   

ಗ್ರಾಹಕರು ತಮಗೆ ಬೇಕಾದ ಯೋಜನೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಕಾರು ಖರೀದಿ ಮಾಡಿದಂದಿನಿಂದ 11 ವರ್ಷಗಳವರೆಗೆ ನಾವು ರಸ್ತೆ ಬದಿಯ ನೆರವನ್ನು ಕೂಡ ಒದಗಿಸುತ್ತಿದ್ದೇವೆ ಎಂದರು.  

 ಸಕ್ರಿಯ ವಾರಂಟಿ ಇಲ್ಲದ ಗ್ರಾಹಕರು ವಾಹನ ಖರೀದಿಸಿದ ಮೂರು ವರ್ಷಗಳಿಂದ 6ನೇ ವರ್ಷದವರೆಗೆ ಒಂದು ವರ್ಷದ ವಿಸ್ತೃತ ವಾರಂಟಿಯನ್ನು ಖರೀದಿಸಲು ಅವಕಾಶವಿದೆ.