ಬೆಳಗಾವಿ : ಲಖನೌದ ವಜಿರಂಜನ್ ಕೋಟರ್್ ಆವರಣದಲ್ಲಿ ಗುರುವಾರ ನಡೆದ ಬಾಂಬ ಬ್ಲಾಸ್ಟ್ ಕೃತ್ಯವನ್ನು ಖಂಡಿಸಿ ಶುಕ್ರವಾರ ಬೆಳಗಾವಿ ನ್ಯಾಯವಾದಿಗಳ ಸಂಘದ ಸದಸ್ಯರು ಕೋಟರ್್ ಆವರಣದಿಂದ ಡಿಸಿ ಕಚೇರಿ ವರೆಗೆ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಮೂಲಕ ಗೃಹ ಸಚಿವ ಅಮಿತ ಶಾ ಅವರಿಗೆ ಮನವಿ ರವಾನಿಸಿದರು.
ಇತ್ತಿಚಿನ ದಿನಗಳ ನ್ಯಾಯವಾದಿಗಳ ಮೇಲೆ ಹಲ್ಲೆ ಸೇರಿದಂತೆ ಇನ್ನಿತರ ಘಟನೆಗಳು ನಡೆಯುತ್ತಿರುವುದ್ದರಿಂದ ನ್ಯಾಯವಾದಿಗಳಲ್ಲಿ ಆತಂಕ ಎಡೆ ಮಾಡಿಕೊಟ್ಟಿದೆ. ಸಮಾಜದಲ್ಲಿನ ಶೋಷತರಿಗೆ ನ್ಯಾಯ ಒದಗಿಸಲು ಹೋರಾಡುವ ವಕೀಲರುಗಳಿಗೆ ರಕ್ಷಣೆ ಇಲ್ಲದಂತಾಗಿದೆ. ನ್ಯಾಯವಾದಿಗಳ ರಕ್ಷಣೆಗೆ ಸಕರ್ಾರ ಕಾನೂನು ರೂಪಿಸಬೇಕು. ಲಖನೌದ ವಜಿರಂಜನ್ ಕೋಟರ್್ ಆವರಣದಲ್ಲಿ ನಡೆದಿರುವ ಬಾಂಬ ಬ್ಲಾಸ್ಟ್ದ ಬಗ್ಗೆ ವಿಶೇಷ ಪೊಲೀಸ್ ತನಿಖಾ ತಂಡ ರಚಿಸಿ ತನಿಖೆಯನ್ನು ಕೈಗೊಂಡು ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ನ್ಯಾಯವಾದಿಗಳು ಒತ್ತಾಯಿಸಿದರು.
ನ್ಯಾಯವಾದಿಗಳ ಸಂಘದ ಪ್ರಧಾನ ಕಾರ್ಯದಶರ್ಿ ಆರ್.ಸಿ. ಪಾಟೀಲ, ಕಲ್ಮೇಶ ಮಾಯಣ್ಣಾಚೆ, ಸಂತೋಷ ಪಾಟೀಲ, ನಿತಿನ ಗಾಣಗಿ, ಪ್ರಭಾಕರ ಪವಾರ ಸೇರಿದಂತೆ ಹಿರಿಯ ಕಿರಿಯ ನ್ಯಾಯವಾದಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.